ಟ್ರಂಪ್ ಭೇಟಿಯಿಂದ ಅಮೆರಿಕಕ್ಕೆ ಲಾಭ, ನಮಗಲ್ಲ: ಬಿಜೆಪಿ ಮುಖಂಡನಿಂದಲೇ ಅಪಸ್ವರ

Update: 2020-02-23 09:29 GMT
ಫೈಲ್ ಫೋಟೊ

ಭುವನೇಶ್ವರ, ಫೆ.23: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿರುವುದು ತಮ್ಮ ದೇಶದ ಆರ್ಥಿಕತೆಗೆ ಉತ್ತೇಜನ ಕೊಡುವ ಉದ್ದೇಶದಿಂದಲೇ ಹೊರತು ಅವರ ಭೇಟಿಯಿಂದ ಭಾರತಕ್ಕೆ ಯಾವುದೇ ಲಾಭ ಇಲ್ಲ ಎಂದು ಹಿರಿಯ ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

"ಅವರು ಬಂದಿರುವುದು ಅವರ ಆರ್ಥಿಕತೆಯ ಉತ್ತೇಜನದ ದೃಷ್ಟಿಯಿಂದಲೇ ಹೊರತು ನಮ್ಮ ಆರ್ಥಿಕತೆಗೆ ಉತ್ತೇಜನ ನೀಡಲು ಅಲ್ಲ. ಅವರ ಭೇಟಿಯಿಂದ ನಮ್ಮ ದೇಶಕ್ಕೆ ಯಾವುದೇ ಪ್ರಯೋಜನವಾಗುತ್ತದೆ ಎಂದು ನನಗೆ ಅನಿಸುವುದಿಲ್ಲ'' ಎಂದು ಅವರು ಅಭಿಪ್ರಾಯಿಸಿದ್ದಾರೆ.

ಕೆಲ ರಕ್ಷಣಾ ಒಪ್ಪಂದಗಳು ಆಗಬಹುದು. ಅದು ಕೂಡಾ ಅವರಿಗೇ ಲಾಭ. ಎಲ್ಲಕ್ಕಿಂತ ಹೆಚ್ಚಾಗಿ ರಕ್ಷಣಾ ಸಾಧನಗಳಿಗೆ ನಾವು ಪಾವತಿಸುತ್ತೇವೆ. ಅವರು ಉಚಿತವಾಗಿಯೇನೂ ನೀಡುವುದಿಲ್ಲ ಎಂದು ಬಿಜೆಪಿ ಸಂಸದರೂ ಆಗಿರುವ ಸುಬ್ರಮಣಿಯನ್‌ ಸ್ವಾಮಿ  ಹೇಳಿದರು.

ಇದೇ ಸಮಾರಂಭದಲ್ಲಿ ಮಾತನಾಡಿದ ಸಿಪಿಎಂ ಮುಖಂಡ ಸೀತಾರಾಂ ಯಚೂರಿ, "ಅವರ ಭೇಟಿ ಬಗ್ಗೆ ನಮಗೆ ಆತಂಕವಿದೆ. ಅಮೆರಿಕದ ಕೃಷಿಕರಿಗೆ ರಿಯಾಯ್ತಿಗಳನ್ನು ಪಡೆಯುವ ಸಲುವಾಗಿ ಟ್ರಂಪ್ ಬರುತ್ತಿದ್ದಾರೆ" ಎಂದು ಹೇಳಿದರು.

ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಆರ್ಥಿಕತೆಗೆ ಉತ್ತೇಜನ ನೀಡುವ ಅನಿವಾರ್ಯತೆಯನ್ನು ಉಭಯ ಮುಖಂಡರು ಪ್ರತಿಪಾದಿಸಿದರು.

ಸುಬ್ರಮಣಿಯನ್‌ ಸ್ವಾಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News