​ಭಾರತ ಭೇಟಿಗೆ ಮುನ್ನ 'ಬಾಹುಬಲಿ'ಯಾದ ಟ್ರಂಪ್!

Update: 2020-02-23 09:35 GMT

ಹೊಸದಿಲ್ಲಿ, ಫೆ.23: ಭಾರತ ಭೇಟಿಗೆ ಸೋಮವಾರ ಆಗಮಿಸಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , ಜನಪ್ರಿಯ 'ಬಾಬುಬಲಿ' ಚಿತ್ರದ ದೃಶ್ಯ ತುಣುಕನ್ನು ಟ್ವೀಟ್ ಮಾಡಿದ್ದಾರೆ. ದದರಲ್ಲಿ ಯುದ್ಧದಲ್ಲಿ ಹೋರಾಡುವ ವೀರಯೋಧನಾಗಿ ಬಾಹುಬಲಿಯನ್ನು ಬಿಂಬಿಸಿದ್ದು, ಸ್ವತಃ ಟ್ರಂಪ್ ಬಾಬುಬಲಿಯ ಗೆಟಪ್‌ನಲ್ಲಿ ವೀಡಿಯೊದಲ್ಲಿ ಕಾಣಿಸುತ್ತಿದ್ದಾರೆ. "ಭಾರತದ ನನ್ನ ಆಪ್ತ ಸ್ನೇಹಿತರ ಜತೆ"ಗಿನ ಭೇಟಿಯನ್ನು ತಾವು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

ಸೋಮವಾರದಿಂದ ಎರಡು ದಿನಗಳ ಭಾರತ ಭೇಟಿಯನ್ನು ತಾನು ಎದುರು ನೋಡುತ್ತಿರುವುದಾಗಿ ಟ್ರಂಪ್ ವೀಡಿಯೊ ತುಣುಕಿನಲ್ಲಿ ಹೇಳಿದ್ದಾರೆ. ಬಾಹುಬಲಿ ಚಿತ್ರದ ವೀಡಿಯೊದಲ್ಲಿ ಬಾಹುಬಲಿ ಪಾತ್ರದ ಮುಖಕ್ಕೆ ಟ್ರಂಪ್ ಮುಖವನ್ನು ಸೂಪರ್ ಇಂಪೋಸ್ ಮಾಡಲಾಗಿದೆ. ತಮ್ಮ ಸಾಮ್ರಾಜ್ಯದಲ್ಲಿ ಶಾಂತಿಸ್ಥಾಪನೆಗೆ ಹೋರಾಡುವ ಯೋಧನನ್ನಾಗಿ ತಮ್ಮನ್ನು ವಿಡಿಯೊದಲ್ಲಿ ಬಿಂಬಿಸಿಕೊಂಡಿದ್ದಾರೆ.

ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್ ಎರಡು ದಿನಗಳ ಅಧಿಕೃತ ಭೇಟಿಗಾಗಿ ಆಗಮಿಸುತ್ತಿದ್ದಾರೆ. ಪುತ್ರಿ ಇವಾಂಕಾ ಟ್ರಂಪ್, ಅಳಿಯ ಜರೆಡ್ ಕುಶ್ನೆರ್ ಸೇರಿದಂತೆ ದೊಡ್ಡ ನಿಯೋಗ ಟ್ರಂಪ್ ಜತೆಗೆ ಆಗಮಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News