ಗೋವಾದಲ್ಲಿ ನೌಕಾಪಡೆಯ ವಿಮಾನ ಪತನ

Update: 2020-02-23 14:43 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ/ಗೋವಾ, ಫೆ.23: ವಾಸ್ಕೋದ ಐಎನ್‌ಎಸ್ ಹಂಸ ನೌಕಾನೆಲೆಯಿಂದ ರವಿವಾರ ಬೆಳಿಗ್ಗೆ ಮಾಮೂಲು ತರಬೇತಿ ಹಾರಾಟವನ್ನು ಆರಂಭಿಸಿದ್ದ ಭಾರತೀಯ ನೌಕಾಪಡೆಯ ಮಿಗ್-29ಕೆ ವಿಮಾನವು ಪತನಗೊಂಡಿದೆ. ವಿಮಾನದ ಪೈಲಟ್ ಹೊರಗೆ ಜಿಗಿದು ಸುರಕ್ಷಿತವಾಗಿ ಪಾರಾಗಿದ್ದಾರೆ.

ಈ ಘಟನೆಯ ಬಗ್ಗೆ ವಿಚಾರಣೆಗೆ ಆದೇಶಿಸಲಾಗಿದೆ ಎಂದು ನೌಕಾಪಡೆಯು ಟ್ವೀಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News