ಒಂದು ವರ್ಷದಲ್ಲಿ ಉ.ಪ್ರದೇಶದ ಗೋಶಾಲೆಗಳಲ್ಲಿ 9,261 ಜಾನುವಾರುಗಳ ಸಾವು

Update: 2020-02-24 14:36 GMT

ಲಕ್ನೋ,ಫೆ.24: ಕಳೆದ ವರ್ಷ ರಾಜ್ಯದಲ್ಲಿಯ ವಿವಿಧ ಗೋಶಾಲೆಗಳಲ್ಲಿ 9,261 ಜಾನುವಾರುಗಳು ಮೃತಪಟ್ಟಿವೆ, ಆದರೆ ನೈಸರ್ಗಿಕ ಕಾರಣಗಳಿಂದ ಈ ಸಾವುಗಳು ಸಂಭವಿಸಿರುವುದರಿಂದ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗಿಲ್ಲ ಎಂದು ಉತ್ತರ ಪ್ರದೇಶದ ಪಶು ಸಂಗೋಪನಾ ಸಚಿವ ಲಕ್ಷ್ಮೀನಾರಾಯಣ ಚೌಧುರಿ ಅವರು ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ತಿಳಿಸಿದರು.

ಮರಣೋತ್ತರ ಪರೀಕ್ಷೆ ನಡೆಸದೆ ನೈಸರ್ಗಿಕ ಕಾರಣಗಳಿಂದ ಸಾವುಗಳು ಸಂಭವಿಸಿವೆ ಎಂಬ ನಿರ್ಧಾರಕ್ಕೆ ಸರಕಾರವು ಬಂದಿದ್ದು ಹೇಗೆ ಎಂದು ಪ್ರತಿಪಕ್ಷ ನಾಯಕ ಹಾಗೂ ಎಸ್‌ಪಿ ಸದಸ್ಯ ಆರ್.ಜಿ.ಚೌಧುರಿ ಪ್ರಶ್ನಿಸಿದಾಗ ಮರಣೋತ್ತರ ಪರೀಕ್ಷೆ ನಡೆಸದ್ದನ್ನು ಒಪ್ಪಿಕೊಂಡ ಸಚಿವರು, ಯಾವುದೇ ವಿಷಯ ತನ್ನ ಗಮನಕ್ಕೆ ಬಂದರೆ ಆ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದರು.

ಭಾರತ ಮಾತಾ ಕಿ ಜೈ, ‘ಗೋಮಾತಾ ಕಿ ಜೈ’ ಎಂದು ಘೋಷಣೆಗಳನ್ನಷ್ಟೇ ಕೂಗಿದರೆ ಸಾಲದು,ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ನೋಡಿಕೊಳ್ಳಲು ಜನರ ವ್ಯವಸ್ಥೆಯೂ ಆಗಬೇಕು ಎಂದು ಬಿಜೆಪಿ ಸದಸ್ಯ ಸುರೇಂದ್ರ ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News