ಟ್ರಂಪ್ ಭೇಟಿ: 300 ವರ್ಷಗಳ ಬಳಿಕ ಮೊದಲ ಬಾರಿಗೆ ತಾಜ್‌ಮಹಲ್ ನಲ್ಲಿ ಸಮಾಧಿ ಪ್ರತಿಕೃತಿ ಸ್ವಚ್ಛ

Update: 2020-02-24 16:30 GMT

ಹೊಸದಿಲ್ಲಿ, ಫೆ. 24: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದ ಜನಪ್ರಿಯ ಸ್ಮಾರಕ ತಾಜ್‌ಮಹಲ್ ಭೇಟಿಗೆ ಆಗಮಿಸುವುದಕ್ಕಿಂತ ಪ್ರೇಮಸೌಧಧ ಒಳಗಿರುವ ಎರಡು ಸಮಾಧಿಯ ಪ್ರತಿಕೃತಿಗೆ 300 ವರ್ಷಗಳ ಬಳಿಕ ಮೊದಲ ಬಾರಿಗೆ ಸ್ವಚ್ಛಗೊಳಿಸಲಾಗಿದೆ.

300 ವರ್ಷಗಳ ಹಿಂದೆ ಸ್ಥಾಪಿಸಲಾದ ಈ ಸಮಾಧಿಗಳ ಪ್ರತಿಕೃತಿಯನ್ನು ಇದೇ ಮೊದಲ ಬಾರಿಗೆ ಮಣ್ಣಿನ ದಪ್ಪ ಲೇಪನ ಮಾಡುವ ಮೂಲಕ ಸ್ವಚ್ಛಗೊಳಿಸಲಾಗಿದೆ. ಬಳಿಕ ಭಟ್ಟಿ ಇಳಿಸಿದ ನೀರಿನಿಂದ ತೊಳೆಯಲಾಗಿದೆ. ಸುಂದರವಾಗಿ ಕಾಣಲು ಭಾರತೀಯ ಮಹಿಳೆಯರು ಮುಖಕ್ಕೆ ಸಾಂಪ್ರದಾಯಿಕವಾಗಿ ಮಣ್ಣಿನ ಲೇಪನದ ಮಾಡುವ ಕ್ರಮದಿಂದ ಈ ಸ್ವಚ್ಛಗೊಳಿಸುವ ಪ್ರಕ್ರಿಯೆ ಪ್ರೇರಿತವಾಗಿದೆ. ತಾಜ್‌ಮಹಲ್ ಅನ್ನು ಮಣ್ಣಿನ ಲೇಪನದಿಂದ ಐದು ಬಾರಿ ಸ್ವಚ್ಛಗೊಳಿಸಲಾಗಿತ್ತು. ಆದರೆ, ಸಮಾಧಿಯ ಪ್ರತಿಕೃತಿಯನ್ನು ಇದುವರೆಗೆ ಸ್ವಚ್ಛಗೊಳಿಸಿರಲಿಲ್ಲ. ಮೊಗಲ್ ಸಾಮ್ರಾಟ್ ಶಹಜಹಾನ್ ಹಾಗೂ ಅವರ ಪತ್ನಿ ಮುಮ್ತಾಝ್ ಮಹಾಲ್ ಅವರ ನಿಜವಾದ ಸಮಾಧಿ ಪ್ರತಿಕೃತಿಯ ಕೆಳಗಿರುವ ಕೊಠಡಿಯಲ್ಲಿ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News