×
Ad

ಕೊರೋನ ಎಫೆಕ್ಟ್: ಚೀನಾ ಸಂಸತ್ ಅಧಿವೇಶನ ಮುಂದೂಡಿಕೆ

Update: 2020-02-24 22:02 IST

ಬೀಜಿಂಗ್,ಫೆ.24: ಕೊರೋನ ವೈರಸ್ ಪಿಡುಗನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿರುವ ಚೀನಾವು, 1966ರ ಸಾಂಸ್ಕೃತಿಕ ಕ್ರಾಂತಿಯ ಬಳಿಕ ಪ್ರಪ್ರಥಮ ಬಾರಿಗೆ ತನ್ನ ವಾರ್ಷಿಕ ಸಂಸತ್ ಅಧಿವೇಶನವನ್ನು ಮುಂದೂಡಿದೆ.

   ಪ್ರತಿ ವರ್ಷವೂ ನಡೆಯುವ ರಾಷ್ಟ್ರೀಯ ಜನತಾ ಕಾಂಗ್ರೆಸ್ ಅಧಿವೇಶನದ ಸಭೆಯಲ್ಲಿ ಅಧ್ಯಕ್ಷ ಕ್ಸಿಜಿನ್ ಪಿಂಗ್ ಸೇರಿದಂತೆ ಕಮ್ಯೂನಿಸ್ಟ್ ಪಕ್ಷದ ಉನ್ನತ ನಾಯಕರು ಭಾಗವಹಿಸುವವರಿದ್ದರು.ಈ ಅಧಿವೇಶನದಲ್ಲಿ ಬಜೆಟ್‌ಗಳನ್ನು ಹಾಗೂ ವೈಯಕ್ತಿಕ ಗೊತ್ತುವಳಿಗಳನ್ನು ಅಂಗೀಕರಿಸಲು ಈಗಾಗಲೇ ಕ್ಷವು ನಿರ್ಧರಿಸಿತ್ತು.

ಚೀನಾದಲ್ಲಿ ಕೊರೋನ ವೈರಸ್ ಸೋಂಕಿನಿಂದ ಈವರೆಗೆ 2500ಮಂದಿ ಬಲಿಯಾಗಿದ್ದು, 80 ಸಾವಿರ ಮಂದಿ ಪೀಡಿತರಾಗಿದ್ದಾರೆ.

   ಕೊರೋನ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಸಂತ್ ಅಧಿವೇಶನವನ್ನು ಮುಂದೂಡುವುದು ಸೂಕ್ತವೆಂದು ಸೋಮವಾರ ನಡೆದ ಎನ್‌ಪಿಸಿಯ ಸ್ಥಾಯಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.ಸಾಮಾನ್ಯವಾಗಿ ಈ ಸಭೆಗೆ ಹಾಜ ರಾಗುತ್ತಿದ್ದ ಹಲವಾರು ಉನ್ನತ ಅಧಿಕಾರಿಗಳು ತಮ್ಮ ಪ್ರಾಂತಗಳಲ್ಲಿ ತಲೆದೋರಿರುವ ಕೊರೋನ ಪಿಡುಗನ್ನು ನಿಭಾಯಿಸುವ ಕಾರ್ಯಾಚರಣೆಯಲ್ಲಿ ವ್ಯತ್ಯಸ್ತ ರಾಗಿರುವುದು ಎನ್‌ಪಿಸಿ ಸಭೆ ಮುಂದೂಡಿಕೆಗೆ ಇನ್ನೊಂದು ಕಾರಣವೆನ್ನಲಾಗಿದೆ.

    ಎನ್‌ಪಿಸಿ ಸಭೆ ನಡೆಸಿದಲ್ಲಿ, ದೇಶದ ಉನ್ನತ ಕಮ್ಯೂನಿಸ್ಟ್ ನಾಯಕರು ಸೇರಿದಂತೆ ಎಲ್ಲಾ ಪ್ರತಿನಿಧಿಗಳು ಮುಖಗವಸು (ಮಾಸ್ಕ್) ಧರಿಸಿಕೊಂಡೇ ಬಬೇಕಾದ ಪರಿಸ್ಥಿತಿಯಿರುವುದರಿಂದ ಸರಕಾರದ ವರ್ಚಸ್ಸಿನ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆಯಿದೆ. ಈ ಕಾರಣದಿಂದಲೂ ಎನ್‌ಪಿಸಿ ಸಭೆ ರದ್ದಾಗಿ ರಬಹುದು ಎಂದು ಅಂತಾರಾಷ್ಟ್ರೀಯ ವಿಶ್ಲೇಷಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News