ಅಫ್ಘಾನ್‌ನಲ್ಲಿಯೂ ಕೊರೋನಾ ಭೀತಿ: ಮೂರು ಶಂಕಿತ ಪ್ರಕರಣಗಳು ಪತ್ತೆ

Update: 2020-02-24 16:38 GMT

    ಬೀಜಿಂಗ್,ಫೆ.23: ಕೊರೋನ ಮಹಾಮಾರಿ ಈಗ ಅಫ್ಘಾನಿಸ್ತಾನದಲ್ಲಿ ಯೂ ಕಾಣಿಸಿಕೊಂಡಿದೆಯೆಂದು ಅಲ್ಲಿನ ಸಾರ್ವಜನಿಕ ಆರೋಗ್ಯ ಸಚಿವ ಫಿರೋಝುದ್ದೀನ್ ಫಿರೋಝ್ ಸೋಮವಾರ ತಿಳಿಸಿದ್ದಾರೆ. ಕಾಬೂಲ್‌ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು  ಪಶ್ಚಿಮ ಅಫ್ಘಾನಿಸ್ತಾನದ ಹೇರತ್ ಪ್ರಾಂತದಲ್ಲಿ ಮೂರು ಶಂಕಿತ ಕೊರೋನ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆಯೆಂದು ಹೇಳಿದ್ದಾರೆ.

 ಹೇರತ್ ಪ್ರಾಂತವು ನೆರೆಯ ರಾಷ್ಟ್ರವಾದ ಇರಾನ್ ಜೊತೆ ಗಡಿ ಹಂಚಿಕೊಂಡಿದೆ. ಇರಾನ್‌ನಲ್ಲಿ ಈಗಾಗಲೇ ಕೊರೋನ ವೈರಸ್‌ನ 20ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ ಹಾಗೂ ಎಂಟು ಮಂದಿ ಸಾವನ್ನಪ್ಪಿದ್ದಾರೆ.

‘‘ ಜನರು ಮನೆಯಲ್ಲಿ ಉಳಿದುಕೊಳ್ಳಲು ಯತ್ನಿಸುವಂತೆ ಹಾಗೂ ತಮ್ಮ ಚಲನವಲನಗಳನ್ನು ನಿರ್ಬಂಧಿಸಲು ಮನೆಗಳಲ್ಲಿಯೇ ಉಳಿದುಕೊಳ್ಳುವಂತೆ ಜನರನ್ನು ನಾನು ಕೇಳಿಕೊಳ್ಳುತ್ತಿದ್ದೇನೆ ’’ ಎಂದು ಫಿರೋಝುದ್ದೀನ್ ತಿಳಿಸಿದ್ದಾರೆ.

ಹೇರತ್‌ನಲ್ಲಿ ಪತ್ತೆಯಾಗಿರುವ ಶಂಕಿತ ಕೊರೋನ್ ವೈರಸ್ ರೋಗಿಗಳು ಇತ್ತೀಚೆಗಷ್ಟೇ ಇರಾನ್‌ನಿಂದ ಹಿಂತಿರುಗಿದ್ದಾರೆಂದು ಅಫ್ಘಾನಿಸ್ತಾನದ ರೋಗ ಸರ್ವೇಕ್ಷಣೆ ವಿಭಾಗದ ವರಿಷ್ಠ ಡಾ. ಸೈಯದ್ ಅತಾವುಲ್ಲಾ ಸೈಯದ್‌ಝಾಯ್ ತಿಳಿಸಿದ್ದಾರೆ.

   ಈ ಮಧ್ಯೆ ಇರಾನ್‌ನಲ್ಲಿ ಕೊರೋನ ವೈರಸ್‌ನ ಹಲವಾರು ಶಂಕಿತ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನವು ಇರಾನ್‌ನಿಂ ಎಲ್ಲಾ ವಾಯು ಮಾರ್ಗ ಹಾಗೂ ನೆಲಮಾರ್ಗಗಳ ಸಂಚಾರ ವ್ಯವಸ್ಥೆಯನ್ನು ಅಮಾನತುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News