ದಿಲ್ಲಿ: 14 ವರ್ಷದ ಬಾಲಕನಿಗೆ ಗುಂಡಿಕ್ಕಿದ ಸಂಘಪರಿವಾರ ಕಾರ್ಯಕರ್ತರು

Update: 2020-02-26 10:25 GMT
ಫೋಟೊ ಕೃಪೆ: The Wire

ಹೊಸದಿಲ್ಲಿ, ಫೆ. 25: ಶಹದಾರಾ ಪ್ರದೇಶದ ಕರ್ದಂ ಪುರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸುತ್ತಿರುವ ಸಂಘಪರಿವಾರದ ಕಾರ್ಯಕರ್ತರು 14 ವರ್ಷದ ಬಾಲಕನೋರ್ವನ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡಿನಿಂದ ಗಾಯಗೊಂಡ ಬಾಲಕನನ್ನು ಫೈಝಾನ್ ಎಂದು ಗುರುತಿಸಲಾಗಿದೆ. ಫೈಝಾನ್ ಪ್ರತಿಭಟನೆ ಅಥವಾ ಘರ್ಷಣೆಯಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ, ಆತ ಪರಿಚಿತ ವ್ಯಕ್ತಿಯೋರ್ವರಿಗೆ ಕೆಲವು ವಸ್ತುಗಳನ್ನು ನೀಡಲು ಅಲ್ಲಿಗೆ ಬಂದಿದ್ದ. ಫೈಝಾನ್ ಮೇಲೆ ಪೂರ್ವಾಹ್ನ 11 ಗಂಟೆಗೆ ಸಂಘ ಪರಿವಾರದ ಕಾರ್ಯಕರ್ತರು ಗುಂಡು ಹಾರಿಸಿದರು. ಗಂಭೀರಗೊಂಡಿದ್ದ ಆತನನ್ನು ಆಸ್ಪತ್ರೆಗೆ ಕೊಂಡೊಯ್ಯಲು ಆ್ಯಂಬುಲೆನ್ಸ್ ಬರಲೇ ಇಲ್ಲ. ಸ್ಥಳೀಯರು ನೀಡಿದ ಪ್ರಥಮ ಚಿಕಿತ್ಸೆ ಹೊರತು ಆತನಿಗೆ ಯಾವುದೇ ವೈದ್ಯಕೀಯ ಚಿಕಿತ್ಸೆ ದೊರೆಯಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

‘‘ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲು ಆಗಮಿಸಿದ ಆ್ಯಂಬುಲೆನ್ಸ್ ತಿರುಗಿ ಹೋಗುವಂತೆ ಪೊಲೀಸರು ಸೂಚನೆ ನೀಡಿದರು. ಬೀದಿಯಲ್ಲಿ ಮಲಗಿಸಿದ್ದ ಫೈಝಾನ್‌ನಿಂದ ಕೇವಲ ಅರ್ಧ ಕಿ.ಮೀ. ದೂರದಲ್ಲಿ ಭದ್ರತಾ ಪಡೆ ನಿಂತಿತ್ತು’’ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಆದರೆ, ಪೊಲೀಸರು ಆ್ಯಂಬುಲೆನ್ಸ್ ಅನ್ನು ತಡೆದರು ಎಂಬುದು ಇದುವರೆಗೆ ದೃಢಪಟ್ಟಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News