×
Ad

‘ಕೈದಿ’ ರಿಮೇಕ್‌ನಲ್ಲಿ ಹೃತಿಕ್ ರೋಷನ್?

Update: 2020-02-27 14:50 IST

‘ಸೂಪರ್-30’ ಹಾಗೂ ‘ವಾರ್’ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ದಾಖಲೆ ಸೃಷ್ಟಿಸಿಸುವುದರೊಂದಿಗೆ ನಟ ಹೃತಿಕ್ ರೋಷನ್ 2019ರ ಶ್ರೇಷ್ಟ ವೃತ್ತಿಪರ ನಟರಾಗಿ ಹೊರ ಹೊಮ್ಮಿದ್ದರು. ಈಗ ಹೃತಿಕ್ ರೋಷನ್ ಅಭಿಮಾನಿಗಳು ಅವರ ಮುಂದಿನ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಇದೇ ಸಂದರ್ಭ ದಕ್ಷಿಣ ಭಾರತದ ಚಿತ್ರದ ರಿಮೇಕ್ ಒಂದರಲ್ಲಿ ಹೃತಿಕ್ ರೋಷನ್ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ‘ಅರ್ಜುನ್ ರೆಡ್ಡಿ’ ಹಾಗೂ ‘ಜೆರ್ಸಿ’ ಚಿತ್ರದ ರಿಮೇಕ್ ಬಳಿಕ ಬಾಲಿವುಡ್ ದಕ್ಷಿಣ ಭಾರತದ ಇನ್ನೊಂದು ಚಿತ್ರ ‘ಕೈದಿ’ಯನ್ನು ಹಿಂದಿಗೆ ರಿಮೇಕ್ ಮಾಡುತ್ತಿದೆ. ಈ ಚಿತ್ರವನ್ನು ರಿಲಾಯನ್ಸ್ ಎಂಟರ್‌ಟೈನ್‌ಮೆಂಟ್ ಹಾಗೂ ಡ್ರೀಮ್ ವಾರಿಯರ್ ಪಿಕ್ಚರ್ಸ್‌ ಜಂಟಿಯಾಗಿ ನಿರ್ಮಾಣ ಮಾಡಲಿದೆ. ‘ಕೈದಿ’ ಚಿತ್ರದ ರಿಮೇಕ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವಂತೆ ನಿರ್ಮಾಪಕರು ಹೃತಿಕ್ ರೋಷನ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಚಿತ್ರದ ನಿರ್ಮಾಪಕ ಈ ಚಿತ್ರದ ಬಗ್ಗೆ, ‘‘ಕೈದಿ ನಾಯಕಿ ಇಲ್ಲದ ಚಿತ್ರ. ಯಾವುದೇ ಹಾಡು ಇಲ್ಲ. ಶೇ. 100ರಷ್ಟು ಸಾಹಸದ ಜಾನರ್ ಹೊಂದಿರುವ ಚಿತ್ರ. ಈ ಚಿತ್ರದ ಬಾಲಿವುಡ್ ರಿಮೇಕ್‌ನ ನಿರ್ಮಾಣದಲ್ಲಿ ರಿಲಾಯನ್ಸ್‌ನೊಂದಿಗೆ ಕೈಜೋಡಿಸಲು ನಮಗೆ ಸಂತೋಷವಾಗುತ್ತಿದೆ. ಈ ಚಿತ್ರ ಪಾನ್ ಇಂಡಿಯಾ ಚಿತ್ರಪ್ರೇಮಿಗಳನ್ನು ಖಂಡಿತವಾಗಿ ಮನರಂಜಿಸಲಿದೆ’’ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News