ನ್ಯಾ.ಮುರಳೀಧರ್‌ ವರ್ಗಾವಣೆ ದುರುದ್ದೇಶದ ಕ್ರಮ: ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್

Update: 2020-02-27 16:04 GMT

ಹೊಸದಿಲ್ಲಿ, ಫೆ.27: ನ್ಯಾ. ಮುರಳೀಧರ್‌ರನ್ನು ದಿಲ್ಲಿ ಹೈಕೋರ್ಟ್‌ನಿಂದ ವರ್ಗಾವಣೆಗೊಳಿಸಿರುವುದು ದುರುದ್ದೇಶದ ಮತ್ತು ದಂಡನಾ ಕ್ರಮವಾಗಿದೆ ಎಂದು ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್(ಎಸ್‌ಸಿಬಿಎ) ಅಧ್ಯಕ್ಷ ದುಷ್ಯಂತ್ ದವೆ ಟೀಕಿಸಿದ್ದಾರೆ.

ಕೊಲಿಜಿಯಂನಿಂದ ಶಿಫಾರಸು ಮಾಡಿರುವ ವರ್ಗಾವಣೆ ಅಧಿಸೂಚನೆಯು ಪ್ರಕ್ರಿಯೆಯ ಭಾಗವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಫೆ.12ರಂದು ಮಾಡಿದ್ದ ಶಿಫಾರಸಿನ ಬಗ್ಗೆ ಫೆ.26ರಂದು (ದಿಲ್ಲಿ ಹಿಂಸಾಚಾರದ ಕುರಿತ ಅರ್ಜಿಯ ಬಗ್ಗೆ ನ್ಯಾ. ಮುರಳೀಧರ್ ನೇತೃತ್ವದಲ್ಲಿ ವಿಚಾರಣೆ ನಡೆಸಿದ ಕೆಲವೇ ಗಂಟೆಗಳಲ್ಲಿ) ಅವಸರದ ಕ್ರಮ ಕೈಗೊಂಡಿರುವುದು ದುರುದ್ದೇಶದ ಮತ್ತು ದಂಡನಾರ್ಹ ಕ್ರಮ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ದವೆ ಹೇಳಿದ್ದಾರೆ.

ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ಕೂಡಾ ನ್ಯಾ. ಮುರಳೀಧರ್ ಅವರ ವರ್ಗಾವಣೆಯನ್ನು ಖಂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News