ಭಾರತದ ರಕ್ಷಣಾ ಉಪಕರಣಗಳ ರಫ್ತು 35,000 ಕೋಟಿ ರೂ.ಗೆ ತಲುಪಲಿದೆ: ರಾಜನಾಥ್ ಸಿಂಗ್

Update: 2020-02-27 17:46 GMT

ಬೆಂಗಳೂರು, ಫೆ. 27: ಭಾರತದ ವಾರ್ಷಿಕ ರಕ್ಷಣಾ ಉಪಕರಣಗಳ ರಫ್ತು 2024ರಲ್ಲಿ 35,000 ಕೋಟಿ ರೂಪಾಯಿಗೆ ತಲುಪಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.

 2030ರ ಹೊತ್ತಿಗೆ ಭಾರತದ ಜಗತ್ತಿನ ಪ್ರಮುಖ ಆರ್ಥಿಕತೆಯಾಗಿ ಹೊರ ಹೊಮ್ಮಲಿದೆ. ಇದರಲ್ಲಿ ರಕ್ಷಣಾ ಉದ್ಯಮ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ತಿಳಿಸಿದರು.

 ‘‘ಭಾರತದ ರಕ್ಷಣಾ ಉಪಕರಣಗಳ ರಫ್ತು ಏರಿಕೆಯಾಗುತ್ತಿದೆ. ಕಳೆದ ಎರಡು ವರ್ಷ 17,000 ಕೋಟಿ ರೂಪಾಯಿ ರಕ್ಷಣಾ ಉಪಕರಣಗಳ ರಫ್ತು ಮಾಡಲಾಗಿದೆ. ಆದರೆ, ನಿಮ್ಮ ಸಾಮರ್ಥ್ಯ (ಎಚ್‌ಎಎಲ್)ವನ್ನು ಗಮನದಲ್ಲಿರಿಸಿ ಹೇಳುವುದಾದರೆ ಮುಂದಿನ ವರ್ಷ 35,000 ಕೋಟಿ ರೂಪಾಯಿ ರಕ್ಷಣಾ ಉತ್ಪಾದನೆಗಳನ್ನು ರಫ್ತು ಮಾಡಲು ಸಾಧ್ಯ’’ ಎಂದು ಅವರು ತಿಳಿಸಿದರು.

ನನಗೆ ಇದರ ಬಗ್ಗೆ ನಂಬಿಕೆ ಇದೆ ಎಂದು ರಾಜನಾಥ್ ಸಿಂಗ್ ಇಲ್ಲಿನ ಎಚ್‌ಎಎಲ್‌ನಲ್ಲಿ ಆಯೋಜಿಸಿದ್ದ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News