ಐಪಿಎಲ್-2020 ಪ್ರವೀಣ್ ತಾಂಬೆ ಅನರ್ಹ

Update: 2020-02-27 18:31 GMT

ಮುಂಬೈ, ಫೆ.27: ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಪ್ರವೀಣ್ ತಾಂಬೆ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. 48ರ ಹರೆಯದ ತಾಂಬೆ ಐಪಿಎಲ್‌ನಲ್ಲಿ ಹರಾಜಾದ ಅತ್ಯಂತ ಹಿರಿಯ ವಯಸ್ಸಿನ ಕ್ರಿಕೆಟಿಗ ಎನಿಸಿಕೊಂಡಿದ್ದರು.

ಮುಂಬೈ ಮೂಲದ ಸ್ಪಿನ್ನರ್ ತಾಂಬೆ ಐಪಿಎಲ್-2020ರ ಆವೃತ್ತಿಯಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ. 2018ರಲ್ಲಿ ಯುಎಇನಲ್ಲಿ ನಡೆದಿದ್ದ ಟಿ-10 ಲೀಗ್‌ನಲ್ಲಿ ಭಾಗವಹಿಸಿದ್ದ ಕಾರಣಕ್ಕೆ ತಾಂಬೆ ಅವರನ್ನು ಐಪಿಎಲ್ ಆಡಳಿತ ಮಂಡಳಿ ಐಪಿಎಲ್‌ನಲ್ಲಿ ಆಡುವುದರಿಂದ ಅನರ್ಹಗೊಳಿಸಿದೆ.

ಬಿಸಿಸಿಐ ನಿಯಮದ ಪ್ರಕಾರ ಕೇವಲ ನಿವೃತ್ತ ಆಟಗಾರರು ಮಾತ್ರ ವಿದೇಶಗಳಲ್ಲಿ ನಡೆಯುವ ಲೀಗ್‌ನಲ್ಲಿ ಭಾಗವಹಿಸಬಹುದು. 2018ರಲ್ಲಿ ನಿವೃತ್ತಿಯಾಗಿದ್ದ ತಾಂಬೆ ಟಿ-10 ಲೀಗ್‌ನಲ್ಲಿ ಭಾಗವಹಿಸಿದ್ದರು. ಆದರೆ, ಕಳೆದ ವರ್ಷ ತನ್ನ ನಿವೃತ್ತಿ ನಿರ್ಧಾರವನ್ನು ಹಿಂಪಡೆದಿದ್ದ ತಾಂಬೆ ಮುಂಬೈ ಟಿ-20 ಲೀಗ್‌ನಲ್ಲಿ ಆಡಿದ್ದರು. ಐಪಿಎಲ್ ಹರಾಜಿನಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಐಪಿಎಲ್ ಹರಾಜಿನಲ್ಲಿ ಕೆಕೆಆರ್ ತಂಡ ತಾಂಬೆ ಅವರನ್ನು 20 ಲಕ್ಷ ರೂ. ನೀಡಿ ಖರೀದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News