×
Ad

ಶಿಕ್ಷಣದಲ್ಲಿ ಮುಸ್ಲಿಮರಿಗೆ ಶೇ.5ರಷ್ಟು ಮೀಸಲಾತಿಗೆ ಮಹಾರಾಷ್ಟ್ರ ಸಜ್ಜು

Update: 2020-02-28 14:59 IST

ಹೊಸದಿಲ್ಲಿ, ಫೆ.28: ಮಹಾರಾಷ್ಟ್ರದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಶೇ.5ರಷ್ಟು ಮೀಸಲಾತಿ ಒದಗಿಸುವ ನೂತನ ಮಸೂದೆಯನ್ನು ಮಹಾವಿಕಾಸ್ ಅಘಾಡಿ ಸರಕಾರ ಜಾರಿಗೊಳಿಸಲು ಸಿದ್ದತೆ ನಡೆಸಿದೆ ಎಂದು ರಾಜ್ಯ ಅಲ್ಪಸಂಖ್ಯಾತ ವ್ಯವಹಾರ ಸಚಿವ ನವಾಬ್ ಮಲಿಕ್ ತಿಳಿಸಿದ್ದಾರೆ.

ಈಗ  ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಈ ಮಸೂದೆಯನ್ನು ಸದನದ ಮುಂದಿಡಲು ನಿರ್ಧರಿಸಲಾಗಿದೆ ಎಂದು ನವಾಬ್ ಮಲಿಕ್ ಹೇಳಿದ್ದಾರೆ.

ಉದ್ಯೋಗದಲ್ಲೂ ಮೀಸಲಾತಿಯೊದಗಿಸುವ ಕುರಿತಂತೆ ಸರಕಾರ ಚಿಂತಿಸುತ್ತಿದ್ದು, ಈ ಕುರಿತಂತೆ ಕಾನೂನು ತಜ್ಞರ ಸಲಹೆ ಪಡೆಯಲಾಗುತ್ತಿದೆ ಎಂದು ಅವರು ತಿಳಿಸಿದರು. ಹಿಂದಿನ ಬಿಜೆಪಿ-ಶಿವಸೇನೆ ಸರಕಾರ, ಕೋರ್ಟ್ ಆದೇಶದ ಹೊರತಾಗಿಯೂ ಮುಸ್ಲಿಮರಿಗೆ ಮೀಸಲಾತಿ ಒದಗಿಸಿರಲಿಲ್ಲ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಈ ಹೊಸ ಶೇ 5 ಮೀಸಲಾತಿ ಜಾರಿಯಾದರೆ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಶೇ 50 ಮಿತಿಯನ್ನು ಮೀರಲಿದೆ. ಕಳೆದ ವರ್ಷ ರಾಜ್ಯದಲ್ಲಿ ಮರಾಠರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಘೋಷಿಸಿದಾಗಲೇ ಶೇ 50ರ ಮೀಸಲಾತಿ ಮಿತಿ ದಾಟಿತ್ತು. ಮರಾಠರಿಗೆ ಮೀಸಲಾತಿಯೊದಗಿಸುವ ಹಿಂದಿನ ಸರಕಾರದ ನಿರ್ಧಾರವನ್ನು ಬಾಂಬೆ ಹೈಕೋರ್ಟ್ ಕಳೆದ ವರ್ಷದ ಜೂನ್ ತಿಂಗಳಲ್ಲಿ ಎತ್ತಿ ಹಿಡಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News