ಆರ್ಥಿಕತೆ ಕುಸಿದಿದೆ, ನಾವು ಮಾತ್ರ ಹಿಂದೂ-ಮುಸ್ಲಿಮ್ ಹೊಡೆದಾಟದಲ್ಲಿದ್ದೇವೆ: ಚೇತನ್ ಭಗತ್

Update: 2020-02-28 15:16 GMT

 ಹೊಸದಿಲ್ಲಿ,ಫೆ.28: ಕೊರೋನ ವೈರಸ್ ಭೀತಿಯ ನಡುವೆ ವಿಶ್ವ ಮಾರುಕಟ್ಟೆಗಳು ಪತನಗೊಂಡಿವೆ. ಭಾರತದ ಆರ್ಥಿಕತೆ ತೀರ ಕುಸಿದಿದ್ದು ಆ ಬಗ್ಗೆ ತಕ್ಷಣದ ಗಮನ ಅಗತ್ಯವಾಗಿದೆ,ಆದರೆ ದೇಶದ ಜನರು ಅರ್ಥವಿಲ್ಲದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಹಿಂದು-ಮುಸ್ಲಿಮ್ ವಿವಾದದಲ್ಲಿ ತೊಡಗಿಕೊಂಡಿದ್ದಾರೆ ಎಂದು ಖ್ಯಾತ ಲೇಖಕ ಚೇತನ್ ಭಗತ್ ಅವರು ಶುಕ್ರವಾರ ಹೇಳಿದ್ದಾರೆ.

ಸರಣಿ ಟ್ವೀಟ್‌ಗಳಲ್ಲಿ ವಿವಾದಾತ್ಮಕ ಸಿಎಎ ಕುರಿತು ಈಶಾನ್ಯ ದಿಲ್ಲಿಯನ್ನು ಹಿಂಸಾಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವ ಅವರು,”ಕೊರೋನ ಪಿಡುಗಿನಿಂದಾಗಿ ವಿಶ್ವ ಮಾರುಕಟ್ಟೆಗಳು ಕುಸಿದಿವೆ. ಜಾಗತಿಕ ಬೇಡಿಕೆ ಕುಸಿದಿದೆ. ಈಗಾಗಲೇ ಆರ್ಥಿಕ ಹಿಂಜರಿತದಲ್ಲಿರುವ ಭಾರತವಂತೂ ಚೇತರಿಸಿಕೊಳ್ಳುವುದು ಕಷ್ಟವಾಗಲಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ತಕ್ಷಣದ ಗಮನ ಅಗತ್ಯವಿದೆ. ಆದರೆ ದೇಶವು ಹಿಂದು-ಮುಸ್ಲಿಮ್ ಎಂದು ಮಾತುಗಳಲ್ಲಿಯೇ ಸಮಯವನ್ನು ವ್ಯರ್ಥ ಮಾಡುತ್ತಿದೆ”  ಎಂದು ಟ್ವೀಟಿಸಿದ್ದಾರೆ.

‘ಆರ್ಥಿಕತೆ ಕುರಿತು ನನ್ನ ಟ್ವೀಟ್‌ಗೆ 700 ಲೈಕ್‌ಗಳು ಬಂದಿದ್ದರೆ, ಹಿಂದು-ಮುಸ್ಲಿಮ್ ಕುರಿತ ನನ್ನ ಟ್ವೀಟ್‌ಗಳಿಗೆ ಸರಾಸರಿ 10,000 ಲೈಕ್‌ಗಳು ಬರುತ್ತವೆ. ಇದು ನಮ್ಮ ದೇಶದ ಮನಃಸ್ಥಿತಿಯನ್ನು ಸೂಚಿಸುತ್ತಿದೆ ’ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News