ಹೋಟೆಲ್, ಕಲ್ಯಾಣ ಮಂಟಪ ಭರ್ತಿಯಾಗಿರುವಾಗ ಅರ್ಥವ್ಯವಸ್ಥೆ ವಿಫಲವಾಗಲು ಸಾಧ್ಯವೇ: ಕೇಂದ್ರ ಸಚಿವ ಅಂಗಡಿ

Update: 2020-02-28 17:02 GMT

ಪಣಜಿ, ಫೆ.28: ಭಾರತದ ಅರ್ಥವ್ಯವಸ್ಥೆ ಕುಸಿದಿದೆ ಎಂಬ ಟೀಕಾಕಾರರ ಹೇಳಿಕೆಯಲ್ಲಿ ಹುರುಳಿಲ್ಲ. ಯಾಕೆಂದರೆ ದೇಶದ ಬಹುತೇಕ ಹೋಟೆಲ್‌ಗಳು, ಕಲ್ಯಾಣ ಮಂಟಪಗಳು ಯಾವಾಗಲೂ ತುಂಬಿರುತ್ತದೆ ಎಂದು ರೈಲ್ವೇ ಇಲಾಖೆಯ ಸಹಾಯಕ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.

ಅರ್ಥವ್ಯವಸ್ಥೆ ಕುಸಿದಿದೆ ಎಂದು ಬಹುತೇಕ ಮಾಧ್ಯಮಗಳು, ಜನರು ಹೇಳುತ್ತಿರುತ್ತಾರೆ. ಆದರೆ ಒಮ್ಮೆ ಯೋಚಿಸಿ ನೋಡಿ, ಯಾವುದೇ ಹೋಟೆಲ್‌ಗೆ , ಕಲ್ಯಾಣ ಮಂಟಪಕ್ಕೆ ಹೋಗಿ ಅದು ಭರ್ತಿಯಾಗಿರುತ್ತದೆ. ವಿಮಾನ, ರೈಲು ಕೂಡಾ ಪ್ರಯಾಣಿಕರಿಂದ ಭರ್ತಿಯಾಗಿರುತ್ತದೆ. ಆದರೂ ಪ್ರತೀ ದಿನ ದೂರುತ್ತಾರೆ . ಟಿಕೆಟ್ ಸಿಗುತ್ತಿಲ್ಲ ಎಂದಾದರೆ ಅಷ್ಟೊಂದು ಬೇಡಿಕೆ ಇದೆ ಎಂದರ್ಥ. ಬೇಡಿಕೆ ಇದೆ ಎಂದಾದರೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಹೇಳಲಾಗದು ಎಂದವರು ಅಭಿಪ್ರಾಯಪಟ್ಟರು.

 ಪಣಜಿಯಲ್ಲಿ ನಡೆದ ತಂತ್ರಜ್ಞಾನ ಸಮ್ಮೇಳನದಲ್ಲಿ ಅವರು ಪಾಲ್ಗೊಂಡಿದ್ದರು.ನಾವು ಈಗ ಮಾಡಬೇಕಿರುವ ಕಾರ್ಯವೆಂದರೆ ಶ್ರಮಪಟ್ಟು ಕಠಿಣವಾಗಿ ದುಡಿಮೆ ಮಾಡುವುದು. ಉತ್ಪಾದನಾ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆಯಾಗುವ ಅಗತ್ಯವಿದೆ ಎಂದು ಸಚಿವ ಅಂಗಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News