×
Ad

ಖಾಸಗಿ ವಲಯ ವೈದ್ಯಕೀಯ ಸಂಶೋಧನೆಗೂ ಆದ್ಯತೆ ನೀಡಲಿ: ಅಮಿತ್ ಶಾ

Update: 2020-02-29 22:27 IST

ಭುವನೇಶ್ವರ,ಫೆ.29: ಖಾಸಗಿ ವಲಯವು ಜನರಿಗೆ ಆರೋಗ್ಯಪಾಲನೆ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ವೈದ್ಯಕೀಯ ವಿಜ್ಞಾನದಲ್ಲಿ ಸಂಶೋಧನೆಗೂ ಒತ್ತು ನೀಡಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶನಿವಾರ ಕರೆ ನೀಡಿದ್ದಾರೆ.

ಒಡಿಶಾದ ಭುವನೇಶ್ವರದಲ್ಲಿ ಶನಿವಾರ ಖಾಸಗಿ ನಿರ್ಮಾಣದ ‘ಎಸ್‌ಯುವಿ ಅಲ್ಟಿಮೇಟ್ ಮೆಡಿಕೇರ್’ ಮಲ್ಟಿ ಸೂಪರ್‌ಸ್ಪೆಶಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರದಾನ್ ಉಪಸ್ಥಿತರಿದ್ದರು.

‘‘ ಕೇವಲ ವೈದ್ಯಕೀಯ ಕಾಲೇಜ್‌ಗಳನ್ನು ತೆರೆಯುವುದರಿಂದ ದೇಶದ ಆರೋಗ್ಯ ಪಾಲನಾ ವಲವು ಸಂಪೂರ್ಣ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಖಾಸಗಿ ವಲಯವು ವೈದ್ಯಕೀಯ ವಿಜ್ಞಾಕ್ಕೂ ಹೆಚ್ಚಿನ ಒತ್ತು ನೀಡಬೇಕು’’ ಎಂದು ಅವರು ಕರೆ ನೀಡಿದರು. ರಾಜ್ಯದ ಜನತೆಗೆ ಉತ್ತಮವಾದ ಆರೋಗ್ಯಪಾಲನಾ ಸೌಲಭ್ಯಗಳನ್ನು ಒದಗಿಸಬೇಕಾಗಿದೆಯೆಂದು ಎರಡು ದಿನಗಳ ಒಡಿಶಾ ಪ್ರವಾಸ ಕೈಗೊಂಡಿರುವ ಅಮಿತ್‌ ಶಾ ತಿಳಿಸಿದರು. ಸಾರ್ವಜನಿಕ ವಲಯದ ಉಪಕ್ರಮಗಳಿಂದಾಗಿ ಒಡಿಶಾದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಖಾಸಗಿ ಆರೋಗ್ಯಪಾಲನಾ ಸಂಸ್ಥೆಗಳು ತಲೆಯೆತ್ತಲಿವೆಯೆಂದು ಅವರು ಹೇಳಿದರು.

 ಗುಣಮಟ್ಟದ ಆರೋಗ್ಯಪಾಲನಾ ಸೌಕರ್ಯವನ್ನು ಸ್ಥಾಪಿಸಿದ್ದಕ್ಕಾಗಿ ಅವರು ಶಿಕ್ಷಾ ಓ ಅನುಸಂಧಾನ್ ಚಾರಿಟೇಬಲ್‌ಸ ಸಂಸ್ಥೆಯನ್ನು ಪಟ್ನಾಯಕ್ ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News