ಶತಮಾನದಲ್ಲೊಮ್ಮೆ ಕಾಣಿಸಿಕೊಳ್ಳುವ ವೈರಸ್ ಕೊರೋನ: ಬಿಲ್ ಗೇಟ್ಸ್

Update: 2020-02-29 16:59 GMT

ಶಿಕಾಗೊ (ಅಮೆರಿಕ), ಫೆ. 29: ಕೊರೋನವೈರಸ್ ಸೊಂಕು ಹರಡುವಿಕೆಯ ವೇಗವನ್ನು ತಗ್ಗಿಸಲು ಸಾಧ್ಯವಾಗುವಂತೆ, ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದಕ್ಕಾಗಿ ಆ ದೇಶಗಳಿಗೆ ನೆರವು ನೀಡುವಂತೆ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಶ್ರೀಮಂತ ದೇಶಗಳಿಗೆ ಕರೆ ನೀಡಿದ್ದಾರೆ.

ಅದೇ ವೇಳೆ, ಕೊರೋನವೈರಸನ್ನು ಅವರು ‘ಶತಮಾನದಲ್ಲಿ ಒಮ್ಮೆ ಕಾಣಿಸಿಕೊಳ್ಳುವ’ ವೈರಸ್ ಎಂಬುದಾಗಿ ಬಣ್ಣಿಸಿದ್ದಾರೆ.

‘‘ಆಫ್ರಿಕ ಮತ್ತು ದಕ್ಷಿಣ ಏಶ್ಯದ ದೇಶಗಳಿಗೆ ನೆರವಾಗಿ. ಈ ಮೂಲಕ ಪ್ರಾಣಗಳನ್ನು ಉಳಿಸಲು ಹಾಗೂ ಜಾಗತಿಕ ಮಟ್ಟದಲ್ಲಿ ಕೊರೋನವೈರಸ್ ಹರಡುವುದನ್ನು ತಡೆಯಲು ನಾವು ಸಿದ್ಧರಾದಂತೆ ಆಗುತ್ತದೆ’’ ಎಂದು ಅವರು ‘ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್’ನಲ್ಲಿ ಬರೆದ ಸಂಪಾದಕೀಯದಲ್ಲಿ ಹೇಳಿದ್ದಾರೆ.

ಚೀನಾದಲ್ಲಿ ಹುಟ್ಟಿಕೊಂಡಿರುವ ನೋವೆಲ್-ಕೊರೋನವೈರಸ್ ಈಗ 46 ದೇಶಗಳಿಗೆ ಹರಡಿದೆ. ಈ ಹಿಂದೆ ಕಾಣಿಸಿಕೊಂಡಿರುವ ಮರ್ಸ್ ಅಥವಾ ಸಾರ್ಸ್ ಎಂಬ ರೋಗಗಳಿಗೆ ಕಾರಣವಾಗುವ ವೈರಸ್‌ಗಳ ಕುಟುಂಬಕ್ಕೆ ನೋವೆಲ್-ಕೊರೋನವೈರಸ್ ಸೇರಿದೆಯಾದರೂ, ಅದನ್ನು ನಿಯಂತ್ರಣಕ್ಕೆ ತರುವುದು ತುಂಬಾ ಕಷ್ಟವಾಗಿದೆ ಎಂದು ಗೇಟ್ಸ್ ಬರೆದಿದ್ದಾರೆ.

ರೋಗದ ವಿರುದ್ಧ ಜಾಗತಿಕ ಮಟ್ಟದಲ್ಲಿ ಹೋರಾಡಲು ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಈಗಾಗಲೇ 100 ಮಿಲಿಯ ಡಾಲರ್ (ಸುಮಾರು 721 ಕೋಟಿ ರೂಪಾಯಿ) ದೇಣಿಗೆಯನ್ನು ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News