×
Ad

ಕೊರೋನವೈರಸ್ ಭೀತಿ: ಆಸಿಯಾನ್ ಶೃಂಗ ಸಮ್ಮೇಳನ ಮುಂದೂಡಿದ ಅಮೆರಿಕ

Update: 2020-02-29 22:41 IST

ವಾಶಿಂಗ್ಟನ್, ಫೆ. 29: ಕೊರೋನವೈರಸ್ ಭೀತಿಯ ಹಿನ್ನೆಲೆಯಲ್ಲಿ, ಮುಂದಿನ ತಿಂಗಳು ಲಾಸ್ ವೇಗಸ್‌ನಲ್ಲಿ ನಡೆಯಲು ನಿಗದಿಯಾಗಿರುವ ಆಗ್ನೇಯ ಏಶ್ಯ ದೇಶಗಳ ಸಂಘಟನೆ ಆಸಿಯಾನ್‌ನ ಶೃಂಗಸಭೆಯನ್ನು ಮುಂದೂಡಿದೆ.

‘‘ನೋವೆಲ್-ಕೊರೋನವೈರಸ್ ರೋಗದ ವಿರುದ್ಧದ ಹೋರಾಟದಲ್ಲಿ ಅಂತರ್‌ರಾಷ್ಟ್ರೀಯ ಸಮುದಾಯ ತೊಡಗಿರುವ ಹಿನ್ನೆಲೆಯಲ್ಲಿ, ಆಸಿಯಾನ್ ದೇಶಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಆಸಿಯಾನ್ ಶೃಂಗ ಸಮ್ಮೇಳನವನ್ನು ಮುಂದೂಡುವ ನಿರ್ಧಾರವನ್ನು ಅಮೆರಿಕ ತೆಗೆದುಕೊಂಡಿದೆ’’ ಎಂದು ಅಮೆರಿಕ ಸರಕಾರದ ಹಿರಿಯ ಅಧಿಕಾರಿಯೊಬ್ರಬು ತಿಳಿಸಿದ್ದಾರೆ.

ಅಸೋಸಿಯೇಶನ್ ಆಫ್ ಸೌತ್ ಈಸ್ಟ್ ಏಶ್ಯನ್ ನೇಶನ್ಸ್ (ಆಸಿಯಾನ್)ನ ನಾಯಕರ ಶೃಂಗ ಸಮ್ಮೇಳನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾರ್ಚ್ 14ರಂದು ಏರ್ಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News