×
Ad

ದಲಿತ ವ್ಯಕ್ತಿಗೆ ಜೀವ ಬೆದರಿಕೆ: ಎಂಎನ್‌ಎಸ್ ನಾಯಕನ ವಿರುದ್ಧ ಪ್ರಕರಣ ದಾಖಲು

Update: 2020-03-02 21:01 IST

 ಔರಂಗಾಬಾದ್(ಮಹಾರಾಷ್ಟ್ರ),ಮಾ.2: ಇಲ್ಲಿಯ ಕ್ರಾಂತಿ ಚೌಕ್ ಪೊಲೀಸರು ನಗರದಲ್ಲಿ ಪಾನ್ ಬೀಡಾ ಅಂಗಡಿಯನ್ನು ನಡೆಸುತ್ತಿರುವ ದಲಿತ ವ್ಯಕ್ತಿಗೆ ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ಎಂಎನ್‌ಎಸ್ ನಾಯಕ ಹಾಗೂ ಮಾಜಿ ಶಾಸಕ ಹರ್ಷವರ್ಧನ ಜಾಧವ ಅವರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ತನ್ನ ವಿರುದ್ಧ ದೂರಿನ ಹಿಂದೆ ಶಿವಸೇನೆಯ ಕೈವಾಡವಿದೆ ಎಂದು ಜಾಧವ ಆರೋಪಿಸಿದ್ದಾರೆ.

ಕ್ರಾಂತಿನಗರ ಪ್ರದೇಶದಲ್ಲಿ ತಾನು ತಾತ್ಕಾಲಿಕ ಪಾನ್ ಬೀಡಾ ಅಂಗಡಿಯೊಂದನ್ನು ಮಾಡಿದ್ದು,ಶನಿವಾರ ಅಲ್ಲಿಗೆ ಬಂದಿದ್ದ ಜಾಧವ್ ಅದನ್ನು ತೆಗೆಯುವಂತೆ ಸೂಚಿಸಿದ್ದರು. ತನ್ನ ಜಾತಿನಿಂದನೆ ಮಾಡಿ ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ಅಂಗಡಿ ಮಾಲಿಕ ನಿತಿನ್ ದಾಭಡೆ ದೂರಿನಲ್ಲಿ ಆರೋಪಿಸಿದ್ದಾರೆ.

ಮರಾಠಾ ಮೀಸಲಾತಿ ವಿಷಯದಲ್ಲಿ ಮುನಿಸಿಕೊಂಡು 2018ರಲ್ಲಿ ಶಿವಸೇನೆಗೆ ರಾಜೀನಾಮೆ ನೀಡಿದ್ದ ಜಾಧವ್,ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಅಭ್ಯರ್ಥಿ ಎದುರು ಸ್ಪರ್ಧಿಸಿ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News