ದಿಲ್ಲಿ ಗಲಭೆ ‘ಜನಾಂಗೀಯ ನರಮೇಧ’: ಮಮತಾ ಬ್ಯಾನರ್ಜಿ ಆಕ್ರೋಶ

Update: 2020-03-02 16:20 GMT

    ಕೋಲ್ಕತಾ,ಮಾ.2: ದಿಲ್ಲಿಯಲ್ಲಿ ಕಳೆದ ವಾರ ಅವ್ಯಾಹತವಾಗಿ ನಡೆದ ಕೋಮುಹಿಂಸಾಚಾರವನ್ನು ‘ಜನಾಂಗೀಯ ನರಮೇಧ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಬಣ್ಣಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ಹಲವು ನಾಗರಿಕರು ಪ್ರಾಣ ಕಳೆದುಕೊಳ್ಳಬೇಕಾಯಿತೆಂದು ಅವರು ಹೇಳಿದ್ದಾರೆ. ಕೋಲ್ಕತಾದಲ್ಲಿ ರವಿವಾರ  ಕೇಂದ್ರ ಗೃಹ ಸಚಿವ ಅಮಿತ್‌ಶಾ ನೇತೃತ್ವದಲ್ಲಿ ನಡೆ ರ್ಯಾಲಿಯಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿ  ಮೂವರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆಯೆಂದು ಮಮತಾ ಬ್ಯಾನರ್ಜಿ ಹೇಳಿದರು.

‘‘ಕೋಲ್ಕತಾದ ರಸ್ತೆಗಳಲ್ಲಿ ಗೋಲಿ ಮಾರೋ ಘೋಷಣೆಗಳನ್ನು ಕೂಗಿವರನ್ನು ನಾನು ಖಂಡಿಸುತ್ತೇನೆ’’ ಎಂದು ಬ್ಯಾನರ್ಜಿ ತಿಳಿಸಿದ್ದಾರೆ. ‘‘ ಕಾನೂನು ತನ್ನದೇ ಆದ ದಾರಿಯಲ್ಲಿ ಸಾಗಲಿದೆ. ಇದು ದಿಲ್ಲಿಯಲ್ಲ. ಗೋಲಿಮಾರೋದಂತಹ ಘೋಷಣೆಗಳನ್ನು ನಾನು ಕೋಲ್ಕತಾದಲ್ಲಿ ಸಹಿಸಲಾರೆವು ಎಂದವರು ಹೇಳಿದರು.

ಪಶ್ಚಿಮಬಂಗಾಳ ಸೇರಿದಂತೆ ದೇಶಾದ್ಯಂತ ಬಿಜೆಪಿಯು ‘ಗುಜರಾತ್ ಮಾದರಿಯ ಗಲಭೆಗಳನ್ನು’ಜಾರಿಗೊಳಿಸಲು ಯತ್ನಿಸುತ್ತಿದೆ ಎಂದು ಬ್ಯಾನರ್ಜಿ ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News