ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿ ಯೋಧ ಆತ್ಮಹತ್ಯೆ
Update: 2020-03-05 19:20 IST
ರಾಯಪುರ,ಮಾ.5: ಛತ್ತೀಸ್‌ಗಡ ಸಶಸ್ತ್ರ ಪಡೆ (ಸಿಎಎಫ್)ಗೆ ಸೇರಿದ ಯೋಧನೋರ್ವ ತನ್ನ ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾರಾಯಣಪುರ ಜಿಲ್ಲೆಯ ಒರಛಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಅನಿಲಕುಮಾರ ಯಾದವ ಎಂದು ಹೆಸರಿಸಲಾಗಿದೆ. ಸಿಎಎಫ್ 16ನೇ ಬಟಾಲಿಯನ್‌ನ ಶಿಬಿರದಲ್ಲಿಯ ಬ್ಯಾರಕ್‌ನಲ್ಲಿ ಬುಧವಾರ ರಾತ್ರಿ ತನ್ನ ಸಹೋದ್ಯೋಗಿ ಗಳು ಗಾಢನಿದ್ರೆಯಲ್ಲಿದ್ದಾಗ ಯಾದವ ಆತ್ಮಹತ್ಯೆ ಮಾಡಿಕೊಂಡಿದ್ದಾರೆೆ.
ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ನಿವಾಸಿಯಾಗಿದ್ದ ಯಾದವ ಕೆಲವು ಕೌಟುಂಬಿಕ ಸಮಸ್ಯೆಗಳಿಗೆ ಸಿಲುಕಿದ್ದರೆನ್ನಲಾಗಿದ್ದು,ಇದು ಆತ್ಮಹತ್ಯೆಗೆ ಕಾರಣವಾಗಿರಬ ಹುದು ಎಂದು ಪೊಲೀಸರು ತಿಳಿಸಿದ್ದಾರೆ.