×
Ad

ಮಾನವನಿಂದ ಸಾಕು ನಾಯಿಗೆ ಹರಡಿತೇ ಕೊರೋನ?

Update: 2020-03-05 21:27 IST

ಹಾಂಕಾಂಗ್, ಮಾ. 5: ಹಾಂಕಾಂಗ್‌ನಲ್ಲಿ ಕೊರೋನವೈರಸ್ ರೋಗಿಯೊಬ್ಬರ ಸಾಕುನಾಯಿಗೂ ರೋಗದ ಸೋಂಕು ಹಬ್ಬಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಇದು ಮಾನವರಿಂದ ಪ್ರಾಣಿಗಳಿಗೆ ಸೋಂಕು ಹರಡಿದ ಪ್ರಕರಣವಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 60 ವರ್ಷ ಪ್ರಾಯದ ಮಹಿಳಾ ರೋಗಿಯ ನಾಯಿಯಲ್ಲಿ ನೂತನ-ಕೊರೋನವೈರಸ್ ಸೋಂಕು ಇರುವುದು ಶುಕ್ರವಾರದಿಂದ ನಡೆಸಲಾಗುತ್ತಿರುವ ಪರೀಕ್ಷೆಗಳಲ್ಲಿ ಖಚಿತಪಟ್ಟಿದೆ. ಅಂದಿನಿಂದ ನಾಯಿಯನ್ನು ಪ್ರಾಣಿ ಆಶ್ರಯ ಕೇಂದ್ರವೊಂದರಲ್ಲಿ ಪ್ರತ್ಯೇಕವಾಗಿರಿಸಲಾಗಿದೆ.

ಇದು ಮಾನವರಿಂದ ಪ್ರಾಣಿಗಳಿಗೆ ರೋಗ ಹರಡಿದ ಪ್ರಕರಣವಾಗಿರಬಹುದು ಎನ್ನುವುದಕ್ಕೆ ವಿಶ್ವವಿದ್ಯಾನಿಲಯಗಳ ಪರಿಣತರು ಮತ್ತು ವಿಶ್ವ ಪ್ರಾಣಿ ಆರೋಗ್ಯ ಸಂಘಟನೆ ಸಹಮತ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News