×
Ad

ಅಕ್ರಮ ಹಣ ವರ್ಗಾವಣೆ ಆರೋಪ: ಜೆಟ್ ಏರ್‌ವೇಸ್ ಸ್ಥಾಪಕ ವಿರುದ್ಧ ಈ.ಡಿ.ಯಿಂದ ಪ್ರಕರಣ ದಾಖಲು

Update: 2020-03-05 23:13 IST

ಮುಂಬೈ, ಮಾ. 5: ಜೆಟ್ ಏರ್‌ವೇಸ್‌ನ ಸ್ಥಾಪಕ ನರೇಶ್ ಗೋಯಲ್ ಹಾಗೂ ಇತರ ಕೆಲವರ ವಿರುದ್ಧ ಜಾರಿ ನಿರ್ದೇಶನಾಲಯ ಹಣ ಅಕ್ರಮ ವಹಿವಾಟು ಪ್ರಕರಣ ದಾಖಲಿಸಿದೆ.

ಮುಂಬೈ ಪೊಲೀಸರು ಇತ್ತೀಚೆಗೆ ದಾಖಲಿಸಿದ ಎಫ್‌ಐಆರ್ ಅನ್ನು ಪರಿಗಣಿಸಿ ನರೇಶ್ ಗೋಯಲ್ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾರಿ ನಿರ್ದೇಶನಾಲಯ ಮುಂಬೈಯಲ್ಲಿರುವ ನರೇಶ್ ಗೋಯಲ್ ಅವರ ನಿವಾಸ ಹಾಗೂ ಕಚೇರಿಗಳಿಗೆ ಬುಧವಾರ ದಾಳಿ ನಡೆಸಿತ್ತು. ಅಲ್ಲದೆ, ಪ್ರಕರಣ ದಾಖಲಿಸಿ ಅವರ ವಿಚಾರಣೆ ನಡೆಸಿತ್ತು ಎಂದು ಅವರು ಹೇಳಿದ್ದಾರೆ. ಮುಂಬೈ ಮೂಲದ ಟ್ರಾವಲ್ಸ್ ಕಂಪೆನಿಗೆ ಗೋಯಲ್ ಹಾಗೂ ಇತರರು ವಂಚಿಸಿದ್ದಾರೆ ಎಂದು ಮುಂಬೈ ಪೊಲೀಸರು ದಾಖಲಿಸಿದ ಎಫ್‌ಐಆರ್‌ನಲ್ಲಿ ಹೇಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News