ಕಾಬೂಲ್: ಅಫ್ಘಾನ್ ಉನ್ನತ ನಾಯಕರಿದ್ದ ಸಭೆಯ ಮೇಲೆ ದಾಳಿ

Update: 2020-03-06 16:14 GMT

ಕಾಬೂಲ್ (ಅಫ್ಘಾನಿಸ್ತಾನ), ಮಾ. 6: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಶುಕ್ರವಾರ ನಡೆದ ಸಮಾರಂಭವೊಂದರ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಆ ಸಭೆಯಲ್ಲಿ ದೇಶದ ಉನ್ನತ ನಾಯಕ ಅಬ್ದುಲ್ಲಾ ಹಾಜರಿದ್ದರು. ಆದರೆ, ಅವರು ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಅವರ ವಕ್ತಾರರು ಹೇಳಿದ್ದಾರೆ.

‘‘ದೊಡ್ಡ ಸದ್ದಿನೊಂದಿಗೆ ದಾಳಿ ಆರಂಭಗೊಂಡಿತು. ಬಹುಷಃ ಸಮಾರಂಭದ ಸ್ಥಳದಲ್ಲಿ ರಾಕೆಟ್ ಅಪ್ಪಳಿಸಿರಬಹುದು. ಅಲ್ಲಿ ಹಾಜರಿದ್ದ ಅಬ್ದುಲ್ಲಾ ಮತ್ತು ಇತರ ಕೆಲವು ರಾಜಕಾರಣಿಗಳು ಸುರಕ್ಷಿತವಾಗಿ ಪಾರಾಗಿದ್ದಾರೆ’’ ಎಂದು ಅಬ್ದುಲ್ಲಾರ ವಕ್ತಾರರು ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ಟೆಲಿಫೋನ್ ಮೂಲಕ ತಿಳಿಸಿದರು.

1995ರಲ್ಲಿ ಭಯೋತ್ಪಾದಕರಿಂದ ಹತರಾದ ಬುಡಕಟ್ಟು ನಾಯಕ ಅಬ್ದುಲ್ ಅಲಿ ಮಝಾರಿಯ ಪುಣ್ಯತಿಥಿ ಸಂದರ್ಭದಲ್ಲಿ ಏರ್ಪಡಿಸಲಾದ ಸಮಾರಂಭದ ಮೇಲೆ ದಾಳಿ ನಡೆಸಲಾಗಿತ್ತು.

ದಾಳಿಗೂ ತನಗೂ ಸಂಬಂಧವಿಲ್ಲ ಎಂದು ತಾಲಿಬಾನ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News