×
Ad

ಭೂತಾನ್‌ನಲ್ಲಿ ಮೊದಲ ಕೊರೋನವೈರಸ್ ಸೋಂಕು ಪತ್ತೆ

Update: 2020-03-06 22:10 IST

ಥಿಂಪು (ಭೂತಾನ್), ಮಾ. 6: ಭೂತಾನ್‌ನಲ್ಲಿ ಶುಕ್ರವಾರ ಕೊರೋನವೈರಸ್ ಸೋಂಕಿನ ಮೊದಲ ಪ್ರಕರಣ ವರದಿಯಾಗಿದೆ.

ರೋಗಿಯು 76 ವರ್ಷ ಪ್ರಾಯದದದದದ ಅಮೆರಿಕ ಪ್ರಜೆಯಾಗಿದ್ದು, ಭಾರತಕ್ಕೆ ಪ್ರಯಾಣಿಸಿರುವ ಇತಿಹಾಸ ಹೊಂದಿದ್ದಾರೆ. ಅವರು ಮಾರ್ಚ್ 2ರಂದು ಗುವಾಹಟಿಯಿಂದ ಭೂತಾನ್‌ಗೆ ಬಂದಿದ್ದಾರೆ ಎಂದು ಭೂತಾನ್ ಪ್ರಧಾನಿ ಲೊಟಾಯ್ ಶೆರಿಂಗ್‌ರ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಅವರನ್ನು ಕೊರೋನವೈರಸ್ ಕಾಯಿಲೆಗೆಂದೇ ಮೀಸಲಾಗಿಟ್ಟ ಆಸ್ಪತ್ರೆಯೊಂದರಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅವರು ತನ್ನ ಸಂಗಾತಿ ಹಾಗೂ ಇತರ 10 ಜನರೊಂದಿಗೆ ವಾಹನವೊಂದರಲ್ಲಿ ಪ್ರಯಾಣಿಸುತ್ತಿದ್ದರು. ವಾಹನದಲ್ಲಿದ್ದವರ ಪೈಕಿ 8 ಮಂದಿ ಭಾರತೀಯರು.

ರೋಗಿಯ ಸಂಪರ್ಕಕ್ಕೆ ಬಂದಿರುವ ಎಲ್ಲರನ್ನು ಪ್ರತ್ಯೇಕವಾಗಿರಿಸಲಾಗಿದೆ. ಭೂತಾನ್ ಸರಕಾರವು ಭಾರತ ಸರಕಾರೊಂದಿಗೆ ನಿಕಟ ಸಂಪರ್ಕದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News