ಕೊರೋನವೈರಸ್ ಬಿಕ್ಕಟ್ಟನ್ನು ಗಂಭೀರವಾಗಿ ಪರಿಗಣಿಸಿ: ವಿಶ್ವಸಂಸ್ಥೆ

Update: 2020-03-06 16:43 GMT
Photo: twitter.com/UN/photo

ಬೀಜಿಂಗ್, ಮಾ. 6: ಕೊರೋನವೈರಸ್ ಬಿಕ್ಕಟ್ಟನ್ನು ದೇಶಗಳು ಸಾಕಷ್ಟು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಎಚ್ಚರಿಕೆಯನ್ನು ವಿಶ್ವ ಆರೋಗ್ಯ ಅಧಿಕಾರಿಗಳು ನೀಡಿದ್ದಾರೆ. ಯುರೋಪ್‌ನಾದ್ಯಂತ ಮಾರಕ ಕಾಯಿಲೆಯ ಸೋಂಕು ಪ್ರಕರಣಗಳು ಹೆಚ್ಚುತ್ತಿರುವಂತೆಯೇ ಈ ಎಚ್ಚರಿಕೆ ಹೊರಬಿದ್ದಿದೆ.

ಕೊರೋನವೈರಸ್ ಕಾಯಿಲೆಯು ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂಬ ಭೀತಿ ವ್ಯಕ್ತವಾಗಿರುವಂತೆಯೇ, ಜಾಗತಿಕ ಮಾರುಕಟ್ಟೆಗಳಲ್ಲಿ ತಲ್ಲಣಗಳು ಕಾಣಿಸಿಕೊಂಡಿವೆ.

ಜಗತ್ತಿನಾದ್ಯಂತ 3,300ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿರುವ ಹಾಗೂ ಸುಮಾರು ಒಂದು ಲಕ್ಷ ಮಂದಿಗೆ ಸೋಂಕು ಹಬ್ಬಿಸಿರುವ ಕಾಯಿಲೆಯಿಂದ ರಕ್ಷಣೆ ಪಡೆಯಲು ದೇಶಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ನಾವೆಲ್ಲರೂ ಎದುರಿಸುತ್ತಿರುವ ಭೀತಿಯನ್ನು ಸರಿಗಟ್ಟಲು ಅಗತ್ಯವಾದ ಮಟ್ಟದ ರಾಜಕೀಯ ಬದ್ಧತೆಯನ್ನು ಹೆಚ್ಚಿನ ದೇಶಗಳು ತೋರಿಸುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಅಭಿಪ್ರಾಯಪಟ್ಟಿದೆ.

‘‘ಇದು ಅಣಕು ಕಾರ್ಯಾಚರಣೆಯಲ್ಲ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಹೇಳಿದರು.

‘‘ಈ ಸಾಂಕ್ರಾಮಿಕ ರೋಗವು ಬಡ ದೇಶವಾಗಿರಲಿ, ಶ್ರೀಮಂತ ದೇಶವಾಗಿರಲಿ, ಪ್ರತಿಯೊಂದು ದೇಶಕ್ಕೆ ಬೆದರಿಕೆಯಾಗಿದೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News