ಅಮೆರಿಕ: ಉಪಾಧ್ಯಕ್ಷರು ಉಪಸ್ಥಿತರಿದ್ದ ಸಭೆಯಲ್ಲಿ ಇಬ್ಬರಿಗೆ ಕೊರೋನ ಸೋಂಕು
Update: 2020-03-07 22:30 IST
ವಾಶಿಂಗ್ಟನ್, ಮಾ. 7: ವಾಶಿಂಗ್ಟನ್‌ನಲ್ಲಿ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಭಾಗವಹಿಸಿದ ಸಭೆಯೊಂದರಲ್ಲಿ ಭಾಗವಹಿಸಿದ ಇಬ್ಬರಲ್ಲಿ ನೂತನ-ಕೊರೋನವೈರಸ್ ಸೋಂಕು ಇರುವುದು ಪತ್ತೆಯಾಗಿದೆ.
ಮಾರ್ಚ್ 1ರಿಂದ 3ರವರೆಗೆ ನಡೆದ ಇಸ್ರೇಲ್ ಪರ ಲಾಬಿ ಗುಂಪಿನ ಸಭೆಯಲ್ಲಿ ಮೈಕ್ ಪೆನ್ಸ್ ಅಲ್ಲದೆ, ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಹಾಗೂ ಹತ್ತಾರು ಮಂದಿ ಸಂಸದರು ಭಾಗವಹಿಸಿದ್ದರು.
ಸೋಂಕಿಗೊಳಗಾಗಿರುವ ಇಬ್ಬರು ಸಭೆಯಲ್ಲಿ ಭಾಗವಹಿಸಲು ನ್ಯೂಯಾರ್ಕ್‌ನಿಂದ ಬಂದಿದ್ದರು ಎಂದು ಅಮೆರಿಕನ್ ಇಸ್ರೇಲ್ ಪಬ್ಲಿಕ್ ಅಫೇರ್ಸ್ ಕಮಿಟಿ ಸಭೆಯಲ್ಲಿ ಭಾಗವಹಿಸಿದವರಿಗೆ ಕಳುಹಿಸಿದ ಇಮೇಲ್‌ನಲ್ಲಿ ತಿಳಿಸಿದೆ.