×
Ad

ತಮಿಳುನಾಡಿನ ಸ್ನೇಹಾ, ಕಾಶ್ಮೀರದ ಆರಿಫಾ: ಪ್ರಧಾನಿಯ ಟ್ವಿಟರ್ ಖಾತೆ ನಿರ್ವಹಿಸುವ ಮಹಿಳೆಯರು ಇವರು...

Update: 2020-03-08 14:33 IST

ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ 7 ಮಹಿಳೆಯರು ಇಂದು ಪ್ರಧಾನಿ ನರೇಂದ್ರ ಮೋದಿಯವರ ಸಾಮಾಜಿಕ ಜಾಲತಾಣದ ಖಾತೆಗಳನ್ನು ನಿರ್ವಹಿಸಲಿದ್ದು, ಅವರ ಪರಿಚಯ ಈ ಕೆಳಗಿದೆ.

ಬಡವರ ಹೊಟ್ಟೆ ತುಂಬಿಸುವ ಸ್ನೇಹಾ ಮೋಹನ್ ದಾಸ್: ಮೋದಿಯವರ ಖಾತೆಯನ್ನು ನಿರ್ವಹಿಸುವವರಲ್ಲಿ ಮೊದಲಿಗರು ಫುಡ್ ಬ್ಯಾಂಕ್ ಇಂಡಿಯಾ ಸ್ಥಾಪಕಿ ಸ್ನೇಹಾ ಮೋಹನ್ ದಾಸ್. ಹಸಿವೆಮುಕ್ತ ಸಮಾಜ ಇವರ ಗುರಿಯಾಗಿದ್ದು, ಪ್ರತಿಯೊಬ್ಬರು ಕನಿಷ್ಟ ಒಬ್ಬ ವ್ಯಕ್ತಿಯ ಹೊಟ್ಟೆ ತುಂಬಿಸಲು ಯತ್ನಿಸಬೇಕು ಎಂದು ಅವರು ಹೇಳುತ್ತಾರೆ. ನಿರಾಶ್ರಿತರಿಗೆ ತನ್ನ ತಾಯಿ ಊಟ ನೀಡುತ್ತಿದ್ದುದು ತನ್ನ ಮೇಲೆ ಪ್ರಭಾವ ಬೀರಿತ್ತು ಎಂದವರು ಹೇಳುತ್ತಾರೆ. ಬಡವರ ಹೊಟ್ಟೆ ತುಂಬಿಸುವ ಕೆಲಸವನ್ನು ಇವರ ಫುಡ್ ಬ್ಯಾಂಕ್ ಮಾಡುತ್ತಿದೆ.

ಬಾಂಬ್ ಸ್ಫೋಟದಲ್ಲಿ ಕೈಕಳೆದುಕೊಂಡರೂ ಧೃತಿಗೆಡದ ಮಾಳವಿಕಾ ಅಯ್ಯರ್: ತನ್ನ 13ನೆ ವಯಸ್ಸಿನಲ್ಲಿ ನಡೆದ ಬಾಂಬ್ ಸ್ಫೋಟವೊಂದರಲ್ಲಿ ಕೈಕಳೆದುಕೊಂಡರೂ ಪಿಎಚ್ ಡಿ ಮಾಡಿದ ಮಾಳವಿಕಾ ಅಯ್ಯರ್. "ಕೈಚೆಲ್ಲುವುದು ಯಾವತ್ತೂ ಆಯ್ಕೆಯಲ್ಲ. ನಮ್ಮ ಮಿತಿಯನ್ನು ಮರೆತು ಬಿಡಬೇಕು ಮತ್ತು ಆತ್ಮವಿಶ್ವಾಸ ಹಾಗು ನಂಬಿಕೆಯ ಜೊತೆ ಜಗತ್ತನ್ನು ಎದುರಿಸಬೇಕು" ಎಂದವರು ಹೇಳುತ್ತಾರೆ.

ಕಾಶ್ಮೀರದ ಮಹಿಳೆ ಆರಿಫಾ: ಸ್ಥಳೀಯ ಮಹಿಳೆಯರ ಸಬಲೀಕರಣಕ್ಕಾಗಿ ನಮ್ದಾ ಕರಕುಶಲ ವಸ್ತುಗಳ ತಯಾರಿಯಲ್ಲಿ ತೊಡಗಿರುವವರು ಕಾಶ್ಮೀರದ ಆರಿಫಾ. ಮಹಿಳಾ ಕಲಾಕಾರರ ಪರಿಸ್ಥಿತಿ ಮತ್ತು ಅವರ ಕಲೆಗಳ ಪ್ರದರ್ಶನಕ್ಕೆ ವೇದಿಕೆ ಇಲ್ಲದಿರುವುದೇ ತಾನು ಈ ಕೆಲಸಕ್ಕೆ ಇಳಿಯಲು ಪ್ರೇರೇಪಣೆ ಎಂದವರು ಹೇಳುತ್ತಾರೆ. ಕರಕುಶಲ ವಸ್ತುಗಳ ತಯಾರಿ ಮತ್ತು ಮಾರಾಟದಲ್ಲಿ ಇವರು ಸಾಧಿಸಿದ್ದು ಮಾತ್ರವಲ್ಲ ಹಲವು ಕಾಶ್ಮೀರಿ ಮಹಿಳೆಯರಿಗೆ ಉದ್ಯೋಗವನ್ನೂ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News