ಬಾಲಿವುಡ್ ಪ್ರವೇಶಿಸಲಿರುವ ಮಹೇಶ್ ಬಾಬು

Update: 2020-03-08 09:07 GMT

ಮಹೇಶ್ ಬಾಬು ದಕ್ಷಿಣ ಭಾರತದ ಜನಪ್ರಿಯ ನಟ. ಅವರ ಇತ್ತೀಚೆಗಿನ ಯಶಸ್ವಿ ಚಿತ್ರ ‘ಸರಿಲೇರು ನೀಕೆವ್ವಾರು’ ಜಾಗತಿಕವಾಗಿ 200 ಕೋಟಿ ರೂಪಾಯಿ ಬಾಚಿಕೊಂಡಿತು. ಅವರು ಶೀಘ್ರದಲ್ಲಿ ಬಾಲಿವುಡ್ ಪ್ರವೇಶಿಸಲಿದ್ದಾರೆ. ಸಾಜಿದ್ ನಾಡಿಯಾಡ್‌ವಾಲಾ ನಿರ್ದೇಶನದ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿರುವ ಬಹುತಾರಾಗಣದ ಚಿತ್ರವೊಂದರಲ್ಲಿ ಮಹೇಶ್ ಬಾಬು ನಟಿಸಲಿದ್ದಾರೆ. ಇದು ಅವರ ಚೊಚ್ಚಲ ಬಾಲಿವುಡ್ ಚಿತ್ರವಾಗಲಿದೆ. ರಜನಿಕಾಂತ್, ಚಿರಂಜೀವಿ, ರಾಮಚರಣ್, ದುಲ್ಖರ್ ಸಲ್ಮಾನ್, ಸೂರ್ಯ, ಧನುಷ್, ಪ್ರಭಾಸ್ ಹಾಗೂ ಇತರರು ಹಿಂದಿ ಚಿತ್ರರಂಗ ಪ್ರವೇಶಿಸಿ ಯಶಸ್ವಿಯಾಗಿದ್ದಾರೆ. ವಿಜಯ ದೇವರಕೊಂಡ ಕೂಡ ಇತ್ತೀಚೆಗೆ ಬಾಲಿವುಡ್ ಪ್ರವೇಶಿಸಿದ್ದಾರೆ. ಇದೇ ಹಾದಿಯಲ್ಲಿ ಈಗ ಮಹೇಶ್ ಬಾಬು ಹೆಜ್ಜೆ ಹಾಕುತ್ತಿದ್ದಾರೆ. ಅವರು ಸಾಜಿದ್ ನಾಡಿಯಾಡ್‌ವಾಲಾ ಅವರ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಆರಂಭದ ಮಾತುಕತೆ ಸಂದರ್ಭ ಮಹೇಶ್ ಬಾಬು ಅವರು, ತನಗೆ ಬಾಲಿವುಡ್ ಚಿತ್ರಗಳಲ್ಲಿ ನಟಿಸುವುದರಲ್ಲಿ ಇಷ್ಟ ಇಲ್ಲ ಎಂದು ಹೇಳಿದ್ದರು. ಆದರೆ, ಸ್ಕ್ರಿಪ್ಟ್ ಅವರನ್ನು ಆಕರ್ಷಿಸಿತ್ತು. ಆನಂತರ ಅವರು ತನ್ನ ನಿರ್ಧಾರವನ್ನು ಬದಲಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News