ಚೀನಾ ಹೊರತುಪಡಿಸಿ 93 ದೇಶಗಳಲ್ಲಿ 21,114 ಪ್ರಕರಣ ಪತ್ತೆ

Update: 2020-03-08 15:50 GMT

   ವಿಶ್ವಸಂಸ್ಥೆ,ಮಾ.21: ಚೀನಾಹೊರತುಪಡಿಸಿ ಶನಿವಾರ ಜಗತ್ತಿನಾದ್ಯಂ 93 ದೇಶಗಳಲ್ಲಿ ಕೋವಿಡ್-19 ಕೊರೋನ ವೈರಸ್ ಸೋಂಕಿನ 21,114 ಪ್ರಕರಣಗಳು ದೃಢಪಟ್ಟಿದ್ದು, ಕಳೆದ ದಿನಕ್ಕಿಂತ ಸೋಂಕಿನ ಪ್ರಕರಣಗಳಲ್ಲಿ 3633ರಷ್ಟು ಹೆಚ್ಚಳವಾಗಿದೆಯೆಂದು ವಿಶ್ವ ಆರೋಗ್ಯಸಂಸ್ಥೆ ತಿಳಿಸಿದೆ.

ಇದರೊಂದಿಗೆ ವಿಶ್ವದಾದ್ಯಂತ ಈವರೆಗೆ 1,01,927 ಕೊರೋನವೈರಸ್ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ ಎಂದು ಡಬ್ಲುಎಚ್‌ಓ ಶನಿವಾರ ತಿಳಿಸಿದೆ. ಚೀನಾದಿಂದ ಹೊರಗೆ 78ಕ್ಕೂ ಅಧಿಕ ಮಂದಿ ಕೊರೋನಾ ಸೋಂಕಿನಿಂದ ಶನಿವಾರ ಮೃತಪಟ್ಟಿದ್ದು, ಇದರೊಂದಿಗೆ ರೋಗಕ್ಕೆ ಬಲಿಯಾದವರ ಸಂಖ್ಯೆ 413ನ್ನು ತಲುಪಿದೆ ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಕಳೆದ 24 ತಾಸುಗಳಲ್ಲಿ ಕೊಲಂಬಿಯಾ, ವ್ಯಾಟಿಕನ್, ಟೊಗೋ ಹಾಗೂ ಸ್ಲೊವೊಕಿಯಾ ದೇಶಗಳಲ್ಲಿ ಮೊದಲ ಬಾರಿಗೆ ಕೊರೋನ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆಯೆಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲು ಎಚ್‌ಓ) ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News