×
Ad

ಈಜಿಪ್ಟ್: ಕೊರೊನಾ ಪೀಡಿತ ಹಡಗಿನಲ್ಲಿ ತಮಿಳುನಾಡಿನ 17 ಪ್ರಯಾಣಿಕರು

Update: 2020-03-10 20:03 IST

ಚೆನ್ನೈ: 171 ಪ್ರಯಾಣಿಕರಲ್ಲಿ ಕೊರೋನಾ ವೈರಾಣು ಸೋಂಕಿತರಾಗಿರುವ 12 ಸಿಬ್ಬಂದಿ ಹಾಗೂ 53 ಪ್ರಯಾಣಿಕರಿರುವ ಹಿನ್ನೆಲೆಯಲ್ಲಿ ಈಜಿಪ್ಟ್‌ನ ಲುಝರ್ ನಗರ ಸಮೀಪ ನೈಲ್ ನದಿಯಲ್ಲಿ ಗುರುವಾರದಿಂದ ಲಂಗರು ಹಾಕಿರುವ ಹಡಗಿನಲ್ಲಿ 17 ಮಂದಿ ಭಾರತೀಯರು ಸಿಲುಕಿಕೊಂಡಿದ್ದಾರೆ. ಇವರೆಲ್ಲರೂ ತಮಿಳುನಾಡಿನ ನಿವಾಸಿಗಳು.

ಕೊರೋನ ಲಕ್ಷಣ ಕಂಡು ಬಂದ ಚೆನ್ನೈಯ ಓರ್ವ ಪ್ರಯಾಣಿಕನನ್ನು ಅಲೆಕ್ಸಾಂಡ್ರಿಯಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲ ಪ್ರಯಾಣಿಕರನ್ನು 2ಕ್ಕಿಂತಲೂ ಅಧಿಕ ವಾರಗಳ ಕಾಲ ಪ್ರತ್ಯೇಕವಾಗಿ ಇರಿಸಲಾಗುವುದು ಎಂದು ಹಡಗಿನ ಕ್ಯಾಪ್ಟನ್ ಘೋಷಿಸಿದ್ದಾರೆ. ಹಡಗನ್ನು ಲಕ್ಸರ್‌ನಲ್ಲಿ ಲಂಗರು ಹಾಕಿಸಿದ ಬಳಿಕ, ಎಲ್ಲಾ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಕೊರೋನ ವೈರಾಣು ಸೋಂಕು ಕಂಡು ಬಂದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಚೆನ್ನೈಯ ವ್ಯಕ್ತಿ ಕೂಡ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News