ಯೆಸ್ ಬ್ಯಾಂಕ್ ಪ್ರಕರಣ: 7 ನಿವೇಶನಗಳ ಮೇಲೆ ಸಿಬಿಐ ದಾಳಿ

Update: 2020-03-10 16:16 GMT

ಹೊಸದಿಲ್ಲಿ, ಮಾ.10: ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ ಬಳಿಕ ಕಪೂರ್ ಹಾಗೂ ಇತರ ಆರೋಪಿಗಳಿಗೆ ಸಂಬಂಧಿಸಿದ 7 ನಿವೇಶನಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ರಾಣಾ ಕಪೂರ್, ಡಿಎಚ್‌ಎಫ್‌ಎಲ್, ಆರ್‌ಕೆಡಬ್ಲ್ಯೂ ಡೆವಲಪರ್ಸ್, ಡುಇಟ್ ಅರ್ಬನ್ ವೆಂಚರ್ಸ್ ಪ್ರೈ.ಲಿ.ಗೆ ಸಂಬಂಧಿಸಿದ ನಿವೇಶನಗಳ ಮೇಲೆ ದಾಳಿ ನಡೆಸಲಾಗಿದೆ. ಮುಂಬೈನ ಬಾಂಧ್ರಾದಲ್ಲಿರುವ ಡಿಎಚ್‌ಎಫ್‌ಎಲ್‌ನ ಕಚೇರಿಯ ಮೇಲೆಯೂ ದಾಳಿ ನಡೆಸಿ ದಾಖಲೆಪತ್ರಗಳನ್ನು ಸಂಗ್ರಹಿಸಲಾಗಿದೆ. ಅಲ್ಲದೆ ಯೆಸ್ ಬ್ಯಾಂಕ್ ನಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿ 7 ಜನರ ವಿರುದ್ಧ ಸೋಮವಾರ ಸಿಬಿಐ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದೆ.

ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಕಪೂರ್ ಕುಟುಂಬದ ಎಲ್ಲಾ ಸದಸ್ಯರನ್ನೂ ಆರೋಪಿಗಳು ಎಂದು ಉಲ್ಲೇಖಿಸಲಾಗಿದೆ. ರಾಣಾ ಕಪೂರ್, ಪತ್ನಿ ಬಿಂದೂ ಕಪೂರ್, ಪುತ್ರಿಯರಾದ ರಾಧಾ, ರೋಶ್ನಿ ಮತ್ತು ರಾಖಿ ಸೇರಿದಂತೆ ಒಟ್ಟು 12 ಮಂದಿಯನ್ನು ಆರೋಪಿಗಳೆಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News