×
Ad

ಹೈಕೋರ್ಟ್ ಆದೇಶ ನೀಡಿದರೂ ಸಿಎಎ ಪ್ರತಿಭಟನಕಾರರ ಫೋಟೊಗಳಿರುವ ಬ್ಯಾನರ್ ತೆಗೆಯದ ಆದಿತ್ಯನಾಥ್ ಸರಕಾರ

Update: 2020-03-10 22:23 IST

ಲಕ್ನೋ: ಸಿಎಎ ವಿರೋಧಿ ಪ್ರತಿಭಟನಕಾರರ ಪೋಟೊಗಳಿದ್ದ ಬ್ಯಾನರ್ ಗಳನ್ನು ತೆರವುಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದ ನಂತರವೂ ಆದಿತ್ಯನಾಥ್ ಸರಕಾರ ಬ್ಯಾನರ್ ಗಳನ್ನು ತೆರವುಗೊಳಿಸಿಲ್ಲ ಎಂದು ವರದಿಯಾಗಿದೆ. ಸೋಮವಾರ ಸಂಜೆಯವರೆಗೂ ಆದಿತ್ಯನಾಥ್ ಸರಕಾರ ತೆರವುಗೊಳಿಸಲು ಮುಂದಾಗಿಲ್ಲ ಎನ್ನಲಾಗಿದೆ.

ಆದಿತ್ಯನಾಥ್ ಸರಕಾರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಹೋಲಿ ನಂತರ ಸರಕಾರ ಈ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗಿದೆ.

ಸರಕಾರದ ಕ್ರಮವು "ಜನರ ಖಾಸಗಿತನದಲ್ಲಿ ಅನಗತ್ಯ ಹಸ್ತಕ್ಷೇಪ'' ಎಂದು ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಹಾಗೂ ನ್ಯಾಯಮೂರ್ತಿ ರಮೇಶ್ ಸಿನ್ಹಾ ಅವರ ಪೀಠ ಹೇಳಿದ್ದು, ಬ್ಯಾನರ್ ಗಳ ತೆರವಿಗೆ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News