ರೈಲ್ವೆ ಆರೋಗ್ಯ ಸೇವೆ ನೇಮಕಾತಿಗೆ ಕೇಂದ್ರದಿಂದ ಕರಡು ನೂತನ ನಿಯಮ

Update: 2020-03-12 16:32 GMT

ಹೊಸದಿಲ್ಲಿ, ಮಾ. 12: ಭಾರತೀಯ ರೈಲ್ವೆಯ ಆರೋಗ್ಯ ಸೇವೆಗೆ ನೇಮಕಾತಿ ಕರಡು ನಿಯಮವನ್ನು ರೈಲ್ವೆ ಸಚಿವಾಲಯ ತನ್ನ ಅಧಿಕೃತ ವೆಬ್‌ ಸೈಟ್‌ ನಲ್ಲಿ ಅಪ್‌ಲೋಡ್ ಮಾಡಿದೆ. ಅಲ್ಲದೆ, ಕರಡಿನ ಬಗ್ಗೆ ಸಲಹೆ, ಸೂಚನೆಗಳಿದ್ದರೆ 30 ದಿನಗಳ ಒಳಗೆ ನೀಡುವಂತೆ ತಿಳಿಸಿದೆ. ಕರಡಿನ ಕುರಿತು ಯಾವುದೇ ಟೀಕೆ, ಸಲಹೆಗಳು ಇದ್ದರೆ, ಇಮೇಲ್ ಐಡಿ egrr349@gmail  ಗೆ ಕಳುಹಿಸಿಕೊಡುವಂತೆ ಸಚಿವಾಲಯ ತನ್ನ ವೆಬ್‌ಸೈಟ್‌ನಲ್ಲಿ ಮಾರ್ಚ್ 9ರಂದು ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ತಿಳಿಸಿದೆ.

2018ರ ವರೆಗೆ ನಾಗರಿಕ ಸೇವಾ ಪರೀಕ್ಷೆ ಹಾಗೂ ಎಂಜಿನಿಯರಿಂಗ್ ಸೇವಾ ಪರೀಕ್ಷೆ ಮೂಲಕ ರೈಲ್ವೆಯ ವಿವಿಧ ಸೇವೆಗಳಿಗೆ ಯುಪಿಎಸ್‌ಸಿ ನೇರ ನೇಮಕಾತಿ ಮಾಡುತ್ತಿತ್ತು. ಭಾರತೀಯ ರೈಲ್ವೆ ನಿರ್ವಹಣಾ ಸೇವೆ (ಐಆರ್‌ಎಂಎಸ್) ರೂಪಿಸುವ ನಿರ್ಣಯದ ಬಳಿಕ ಕೇಂದ್ರ ಸರಕಾರ ರೈಲ್ವೆಯ ಹುದ್ದೆಗಳನ್ನು ಎಂಜಿನಿಯರಿಂಗ್ ಸೇವಾ ಪರೀಕ್ಷೆ ಹಾಗೂ ನಾಗರಿಕ ಸೇವಾ ಪರೀಕ್ಷೆ ಮೂಲಕ ಆಯ್ಕೆ ಮಾಡುವುದನ್ನು ಹಿಂದೆಗೆದುಕೊಂಡಿದೆ. ಪ್ರಸ್ತುತ ಭಾರತೀಯ ರೈಲ್ವೆ ವೈದ್ಯಕೀಯ ಸೇವೆ ಹಾಗೂ ರೈಲ್ವೆ ರಕ್ಷಣಾ ಪಡೆಗೆ ಯುಪಿಎಸ್‌ಸಿ ನೇರ ನೇಮಕಾತಿ ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News