×
Ad

70 ಶೇ. ಜರ್ಮನ್ನರಿಗೆ ಕೊರೋನ ಸೋಂಕು ತಗಲಬಹುದು: ಮರ್ಕೆಲ್

Update: 2020-03-12 22:26 IST
Photo: twitter.com/AngelaMerkeICDU/photo

ಬರ್ಲಿನ್ (ಜರ್ಮನಿ), ಮಾ. 12: ಯುರೋಪ್‌ನ ಅತಿ ದೊಡ್ಡ ಆರ್ಥಿಕತೆಯಾಗಿರುವ ಜರ್ಮನಿಯ 70 ಶೇಕಡದಷ್ಟು ಜನರಿಗೆ ನೂತನ-ಕೊರೋನವೈರಸ್ ಸೋಂಕು ತಗಲುವ ಸಾಧ್ಯತೆಯಿದೆ ಎಂದು ದೇಶದ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಬುಧವಾರ ಹೇಳಿದ್ದಾರೆ. ಹಾಗಾಗಿ, ರೋಗವನ್ನು ನಿಭಾಯಿಸಲು ಬೇಕಾದಷ್ಟು ಹಣವನ್ನು ಜರ್ಮನಿ ಖರ್ಚು ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

‘‘ಇದನ್ನು ನಿಭಾಯಿಸಲು ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ಅದಕ್ಕಾಗಿ ಎಷ್ಟು ಹಣ ಖರ್ಚಾಯಿತು ಎನ್ನುವುದನ್ನು ನಾವು ಕೊನೆಗೆ ನೋಡುತ್ತೇವೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

ಈ ಆರೋಗ್ಯ ಬಿಕ್ಕಟ್ಟು ಯಾವ ರೀತಿಯ ಬೆಳವಣಿಗೆಯನ್ನು ಕಾಣುತ್ತದೆ ಎನ್ನವುದು ನನಗೆ ಗೊತ್ತಿಲ್ಲ ಎಂದು ಹೇಳಿದ ಅವರು, ಆದರೆ, ನಮಗೆ ಎದುರಾಗಿರುವ ಅಪಾಯ ಬೃಹತ್ ಪ್ರಮಾಣದ್ದಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News