×
Ad

ದೇಶಾದ್ಯಂತ ಅಂಗಡಿಗಳನ್ನು ಮುಚ್ಚಿದ ಇಟಲಿ: ಮೃತರ ಸಂಖ್ಯೆ 827ಕ್ಕೆ

Update: 2020-03-12 22:31 IST

ರೋಮ್ (ಇಟಲಿ), ಮಾ. 12: ಇಟಲಿಯಲ್ಲಿ ಕೊರೋನವೈರಸ್ ಸೋಂಕು ಹರಡುವುದನ್ನು ತಡೆಯುವ ಹತಾಶ ಪ್ರಯತ್ನವಾಗಿ, ಅಧಿಕಾರಿಗಳು ಬುಧವಾರ ದೇಶಾದ್ಯಂತ ಎಲ್ಲ ಅಂಗಡಿಗಳನ್ನು ಮುಚ್ಚಿದ್ದಾರೆ. ಆದರೆ, ಔಷಧ ಮತ್ತು ಆಹಾರದ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆ.

ದೇಶದಲ್ಲಿ ಕೊರೋನವೈರಸ್‌ನಿಂದಾಗಿ ಕೇವಲ ಎರಡು ವಾರಗಳಲ್ಲಿ 827 ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಭೀತಿ ನೆಲೆಸಿದೆ.

ಪ್ರಧಾನಿ ಜಿಯುಸೆಪ್ ಕಾಂಟೆ ಬುಧವಾರ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೊಸ ನಿರ್ಬಂಧಗಳನ್ನು ಘೋಷಿಸಿದರು.

‘‘ತ್ಯಾಗಗಳನ್ನು ಮಾಡಿರುವ ಎಲ್ಲ ಇಟಲಿಯನ್ನರಿಗೆ ಧನ್ಯವಾದಗಳು. ನಾವು ಶ್ರೇಷ್ಠ ದೇಶವೆನ್ನುವುದು ಈಗ ಸಾಬೀತಾಗುತ್ತಿದೆ’’ ಎಂದು ತನ್ನ ಒಂಬತ್ತು ನಿಮಿಷಗಳ ಭಾಷಣದಲ್ಲಿ ಅವರು ಹೇಳಿದರು.

ದೇಶದಲ್ಲಿ ಸಭೆ ಸೇರುವುದು ಮತ್ತು ಪ್ರಯಾಣಿಸುವುದನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಹಾಗಾಗಿ, ಅಲ್ಲಿನ ರಸ್ತೆಗಳು ಖಾಲಿಯಾಗಿವೆ ಹಾಗೂ ರೆಸ್ಟೋರೆಂಟ್‌ಗಳಿಂದ ಹಿಡಿದು ಚರ್ಚ್‌ಗಳವರೆಗೆ ಎಲ್ಲ ಕಟ್ಟಡಗಳು ಬಾಗಿಲು ಹಾಕಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News