ಯುರೋಪ್‌ನಿಂದ ಅಮೆರಿಕ ಪ್ರಯಾಣ ಒಂದು ತಿಂಗಳು ಸ್ಥಗಿತ: ಟ್ರಂಪ್ ಘೋಷಣೆ

Update: 2020-03-12 17:02 GMT

ವಾಶಿಂಗ್ಟನ್, ಮಾ. 12: ನೂತನ-ಕೊರೋನವೈರಸ್ ಅಥವಾ ಕೋವಿಡ್-19 ಭೀತಿಯ ಹಿನ್ನೆಲೆಯಲ್ಲಿ, ಯುರೋಪ್‌ನಿಂದ ಅಮೆರಿಕಕ್ಕೆ ಮಾಡುವ ಎಲ್ಲ ಪ್ರಯಾಣಗಳನ್ನು ಒಂದು ತಿಂಗಳ ಕಾಲ ಸ್ಥಗಿತಗೊಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ.

ಪ್ರಯಾಣ ನಿಷೇಧವು ಶುಕ್ರವಾರದಿಂದ ಜಾರಿಗೆ ಬರಲಿದೆ ಹಾಗೂ ಈ ಅವಧಿಯಲ್ಲಿ ವ್ಯಾಪಾರವೂ ಸ್ಥಗಿತಗೊಳ್ಳಲಿದೆ.

ಆದರೆ, ಈ ಕಠಿಣವಾದರೂ ಅಗತ್ಯವಾಗಿರುವ ಈ ಕ್ರಮಗಳು ಬ್ರಿಟನ್‌ಗೆ ಅನ್ವಯವಾಗುವುದಿಲ್ಲ ಎಂದು ಟ್ರಂಪ್ ಹೇಳಿದರು. ಬ್ರಿಟನ್‌ನಲ್ಲಿ ಈಗಾಗಲೇ 460 ಕೊರೋನವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ.

‘‘ಯುರೋಪ್‌ನಲ್ಲಿ ಹೆಚ್ಚಿನ ಕೊರೋನವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಯಾಕೆಂದರೆ ಅಲ್ಲಿನ ಸರಕಾರಗಳು ಚೀನಾದಿಂದ ಜನರು ಬರುವುದನ್ನು ತಡೆಯಲು ವಿಫಲವಾಗಿವೆ’’ ಎಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News