×
Ad

ಕೊರೋನವೈರಸನ್ನು ‘ಮಹಾ ಸಾಂಕ್ರಾಮಿಕ ರೋಗ’ ಎಂದು ಘೋಷಿಸಿದ ಡಬ್ಲ್ಯುಎಚ್‌ಒ

Update: 2020-03-12 22:36 IST
Photo: twitter.com/WHO

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮಾ. 12: ಜಗತ್ತಿನಾದ್ಯಂತ 4,300ಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿರುವ ನೋವೆಲ್-ಕೊರೋನವೈರಸನ್ನು ‘ಮಹಾ ಸಾಂಕ್ರಾಮಿಕ ರೋಗ’ ಎಂಬುದಾಗಿ ಪರಿಗಣಿಸಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಘೋಷಿಸಿದೆ.

‘‘ಈ ಸೋಂಕಿನ ಮೇಲೆ ವಿಶ್ವ ಆರೋಗ್ಯ ಸಂಸ್ಥೆಯು ದಿನದ 24 ಗಂಟೆಯೂ ನಿಗಾ ಇಟ್ಟಿದೆ. ಕಳವಳಕಾರಿ ಮಟ್ಟದಲ್ಲಿ ರೋಗ ಹರಡುವಿಕೆ ಮತ್ತು ರೋಗದ ತಿವ್ರತೆಯಿಂದ ನಾವು ಕಳವಳಗೊಂಡಿದ್ದೇವೆ. ಹಾಗೂ ಕಳವಳಕಾರಿ ಮಟ್ಟದ ನಿಷ್ಕ್ರಿಯತೆಯಿಂದಲೂ ನಾವು ಕಳವಳಗೊಂಡಿದ್ದೇವೆ. ಹಾಗಾಗಿ, ಕೋವಿಡ್-19 ಕಾಯಿಲೆಯನ್ನು ‘ಮಹಾ ಸಾಂಕ್ರಾಮಿಕ ರೋಗ’ ಎಂಬುದಾಗಿ ಕರೆಯಬಹುದು ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇವೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.

ದೊಡ್ಡ ಭೌಗೋಳಿಕ ವ್ಯಾಪ್ತಿಯಲ್ಲಿ, ಉದಾಹರಣೆಗೆ ಹಲವು ಖಂಡಗಳಲ್ಲಿ ಹರಡಿರುವ ರೋಗವನ್ನು ಮಹಾ ಸಾಂಕ್ರಾಮಿಕ ರೊಗ (ಪಾಂಡೆಮಿಕ್) ಎಂಬುದಾಗಿ ಘೋಷಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News