ಈ ದೇಶದಲ್ಲಿ 7ರಿಂದ 15 ಕೋಟಿ ಜನರಿಗೆ ಕೊರೋನವೈರಸ್?
Update: 2020-03-13 21:58 IST
ವಾಶಿಂಗ್ಟನ್, ಮಾ. 13: ಅಮೆರಿಕದಲ್ಲಿ 7ರಿಂದ 15 ಕೋಟಿ ಜನರು ನೋವೆಲ್-ಕೊರೋನವೈರಸ್ ಸೋಂಕಿಗೆ ಗುರಿಯಾಗುವ ಸಾಧ್ಯತೆಯಿದೆ ಎಂದು ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ವೈದ್ಯ ಹೇಳಿದ್ದಾರೆ ಎಂದು ಸಂಸದರೊಬ್ಬರು ಗುರುವಾರ ಹೇಳಿದ್ದಾರೆ.
ಅಧ್ಯಕ್ಷರ ಕೊರೋನವೈರಸ್ ಕಾರ್ಯಪಡೆಯ ಸದಸ್ಯರಿಗೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ವಿವರಣೆ ನೀಡಿದ ವೇಳೆ ಸಂಸದೆ ರಶೀದಾ ತಲೈಬ್ ಇದನ್ನು ಹೇಳಿದ್ದಾರೆ.
‘‘ಅಮೆರಿಕದಲ್ಲಿ 7ರಿಂದ 15 ಕೋಟಿ ಜನರು ಕೊರೋನವೈರಸ್ ಕಾಯಿಲೆಗೆ ತುತ್ತಾಗುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಕಾಂಗ್ರೆಸ್‌ನ ವೈದ್ಯ ಸೆನೆಟ್‌ಗೆ ತಿಳಿಸಿದ್ದಾರೆ’’ ಎಂದು ರಶೀದಾ ನುಡಿದರು.