×
Ad

ಇವಾಂಕಾರನ್ನು ಭೇಟಿಯಾಗಿದ್ದ ಆಸ್ಟ್ರೇಲಿಯದ ಗೃಹ ಸಚಿವರಿಗೆ ಕೊರೋನವೈರಸ್

Update: 2020-03-13 22:14 IST

ಸಿಡ್ನಿ (ಆಸ್ಟ್ರೇಲಿಯ), ಮಾ. 13: ಆಸ್ಟ್ರೇಲಿಯದ ಗೃಹ ವ್ಯವಹಾರಗಳ ಸಚಿವ ಪೀಟರ್ ಡಟನ್ ಕೊರೋನವೈರಸ್ ಕಾಯಿಲೆಗೆ ತುತ್ತಾಗಿದ್ದಾರೆ ಹಾಗೂ ಅವರು ಶುಕ್ರವಾರ ಆಸ್ಪತ್ರೆಯ ಪ್ರತ್ಯೇಕಿತ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರು ಕೆಲವು ದಿನಗಳ ಹಿಂದೆ ಅಮೆರಿಕದಲ್ಲಿ ಸಭೆಯೊಂದರಲ್ಲಿ ಭಾಗವಹಿಸಿದ್ದರು. ಆ ಸಭೆಯಲ್ಲಿ ಅಮೆರಿಕದ ಅಟಾರ್ನಿ ಜನರಲ್ ವಿಲಿಯಮ್ ಬರ್ ಭಾಗವಹಿಸಿದ್ದರು. ಅವರು ಮಾರ್ಚ್ 6ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪುತ್ರಿ ಇವಾಂಕಾ ಟ್ರಂಪ್‌ರನ್ನೂ ಭೇಟಿಯಾಗಿದ್ದರು.

‘‘ಇಂದು ಬೆಳಗ್ಗೆ ನಾನು ಏಳುವಾಗ ಜ್ವರ ಮತ್ತು ಶೀತವಿತ್ತು. ತಪಾಸಣೆ ನಡೆಸಿದಾಗ ಕೊರೋನವೈರಸ್ ಸೋಂಕು ತಗಲಿರುವುದು ಪತ್ತೆಯಾಯಿತು’’ ಎಂದು ಅವರು ಹೇಳಿದರು.

ಅವರು ವಾರದ ಹಿಂದೆ ಆಸ್ಟ್ರೇಲಿಯ, ಅಮೆರಿಕ, ಬ್ರಿಟನ್, ಕೆನಡ ಮತ್ತು ನ್ಯೂಝಿಲ್ಯಾಂಡ್ ಒಳಗೊಂಡ ಬೇಹುಗಾರಿಕಾ ಒಕ್ಕೂಟದ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಅಮೆರಿಕದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News