ಮನೆಯಲ್ಲಿ ಪ್ರತ್ಯೇಕವಾಗಿರುವ ಬಗ್ಗೆ ಸರಕಾರದ ಮಾರ್ಗಸೂಚಿಯನ್ನು ಹಂಚಿಕೊಂಡ ಪ್ರಧಾನಿ

Update: 2020-03-14 15:19 GMT

ಹೊಸದಿಲ್ಲಿ,ಮಾ.14: ಶಂಕಿತ ಕೊರೋನವೈರಸ್ ಲಕ್ಷಣಗಳಿರುವವರು ಮನೆಗಳಲ್ಲಿ ಪ್ರತ್ಯೇಕವಾಗಿರುವ ಬಗ್ಗೆ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

‘ ಕೆಲವು ಮಹತ್ವದ ಮಾಹಿತಿಗಳಿಲ್ಲ್ಲಿವೆ,ಓದಿಕೊಳ್ಳಿ’ ಎಂದು ಅವರು ಟ್ವೀಟ್‌ನ್ನು ಆರಂಭಿಸಿದ್ದಾರೆ.

‘ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ರಕ್ಷಣೆಗೆ ಮನೆಯಲ್ಲಿ ಪ್ರತ್ಯೇಕವಾಗಿರುವುದು ಮುಖ್ಯವಾಗಿದೆ’ ಎಂದು ಹೇಳಿರುವ ಆರೋಗ್ಯ ಸಚಿವಾಲಯವು,ಅಂತಹವರು ಚೆನ್ನಾಗಿ ಗಾಳಿಯಾಡುವ,ಲಗತ್ತಾದ ಅಥವಾ ಪ್ರತ್ಯೇಕ ಟಾಯ್ಲೆಟ್ ಹೊಂದಿರುವ ಕೊಠಡಿಯಲ್ಲಿರಬೇಕು. ಅದೇ ಕೋಣೆಯಲ್ಲಿ ಕುಟುಂಬದ ಯಾರಾದರೂ ಉಳಿಯುವ ಅಗತ್ಯವಿದ್ದರೆ ಇಬ್ಬರ ನಡುವೆ ಕನಿಷ್ಠ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು. ಪ್ರತ್ಯೇಕಿತರಾಗಿರುವ ವ್ಯಕ್ತಿಗಳು ವೃದ್ಧರು,ಗರ್ಭಿಣಿಯರು,ಮಕ್ಕಳು ಮತ್ತು ಇತರ ಅಸ್ವಸ್ಥ ವ್ಯಕ್ತಿಗಳಿಂದ ದೂರವಿರಬೇಕು ಎಂದು ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News