ನವಜಾತ ಶಿಶುವಿನಲ್ಲೂ ಕೊರೋನವೈರಸ್ !
Update: 2020-03-14 21:59 IST
ಲಂಡನ್, ಮಾ. 14: ಲಂಡನ್‌ನಲ್ಲಿ ನವಜಾತ ಶಿಶುವೊಂದರಲ್ಲಿ ಕೊರೋನವೈರಸ್ ಸೋಂಕು ಪತ್ತೆಯಾಗಿದೆ ಹಾಗೂ ಇದು ಈ ಸಾಂಕ್ರಾಮಿಕ ರೋಗದ ಅತಿ ಕಿರಿಯ ಬಲಿಪಶು ಎಂದು ‘ಮೆಟ್ರೊ’ ಪತ್ರಿಕೆ ಶುಕ್ರವಾರ ವರದಿ ಮಾಡಿದೆ.
ಕೆಲವು ದಿನಗಳ ಹಿಂದೆ ಮಗುವಿನ ತಾಯಿಯನ್ನು ನ್ಯುಮೋನಿಯ ಚಿಕಿತ್ಸೆಗಾಗಿ ನಾರ್ತ್ ಮಿಡಲ್ ಸೆಕ್ಸ್‌ನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಮಗುವಿನ ಜನ್ಮ ನೀಡಿದ ಬಳಿಕ ತನಗೆ ಕೊರೋನವೈರಸ್ ಇರುವ ವಿಷಯ ಮಹಿಳೆಗೆ ತಿಳಿದಿತ್ತು.
ಮಗು ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಪರೀಕ್ಷೆ ನಡೆಸಿದ ಬಳಿಕ ಅದಕ್ಕೆ ಸೋಂಕು ತಗಲಿರುವುದು ದೃಢಪಟ್ಟಿದೆ.
ಶನಿವಾರದ ವೇಳೆಗೆ, ಬ್ರಿಟನ್‌ನಲ್ಲಿ ಕೊರೋನವೈರಸ್ ಸೋಂಕು ತಗಲಿದವರ ಸಂಖ್ಯೆ 798 ಆಗಿದೆ. 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.