ಚೀನಾ: ಬೀಗಮುದ್ರೆಯಿಂದಾಗಿ 7 ಲಕ್ಷ ಸೋಂಕಿಗೆ ತಡೆ

Update: 2020-03-14 16:30 GMT

ಬೀಜಿಂಗ್, ಮಾ. 14: ಚೀನಾದ ಹುಬೈ ಪ್ರಾಂತ ಮತ್ತು ಅದರ ರಾಜಧಾನಿ ವುಹಾನ್ ನಗರವನ್ನು ಬೀಗಮುದ್ರೆಯಲ್ಲಿಡುವ ಮೂಲಕ ಸುಮಾರು 7 ಲಕ್ಷ ಕೊರೋನವೈರಸ್ ಸೋಂಕು ಪ್ರಕರಣಗಳನ್ನು ಚೀನಾ ತಡೆದಿದೆ ಎಂದು ನೂತನ ಅಂತರ್‌ರಾಷ್ಟ್ರೀಯ ಅಧ್ಯಯನವೊಂದು ತಿಳಿಸಿದೆ.

 ಕೊರೋನವೈರಸ್ ಸೋಂಕಿನ ಕೇಂದ್ರ ಬಿಂದು ವುಹಾನ್‌ನಲ್ಲಿ ಬೀಗಮುದ್ರೆ ಹಾಕುವ ಜೊತೆಗೆ, ಚೀನಾವು ನಗರದೊಳಗಿನ ಸಾರ್ವಜನಿಕ ಸಾರಿಗೆಯನ್ನೂ ಸ್ಥಗಿತಗೊಳಿಸಿದೆ. ಅದೇ ವೇಳೆ, ಮನರಂಜನಾ ಸ್ಥಳಗಳನ್ನು ಮುಚ್ಚಿದೆ ಹಾಗೂ ಸಾರ್ವಜನಿಕ ಸಭೆಗಳನ್ನು ನಿಷೇಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News