×
Ad

ಇರಾನ್: ಹೊಸದಾಗಿ 97 ಸಾವು; ಮೃತರ ಒಟ್ಟು ಸಂಖ್ಯೆ 611ಕ್ಕೆ ಏರಿಕೆ

Update: 2020-03-14 22:02 IST

ಟೆಹರಾನ್, ಮಾ. 14: ಇರಾನ್‌ನಲ್ಲಿ ಕೊರೋನವೈರಸ್‌ನಿಂದಾಗಿ ಹೊಸದಾಗಿ 97 ಸಾವುಗಳು ಸಂಭವಿಸಿವೆ ಎಂದು ದೇಶದ ಸರಕಾರಿ ಟಿವಿ ಶನಿವಾರ ವರದಿ ಮಾಡಿದೆ. ಇದರೊಂದಿಗೆ ದೇಶದಲ್ಲಿ ಈ ಮಾರಾಕ ಸಾಂಕ್ರಾಮಿಕ ಕಾಯಿಲೆಯಿಂದಾಗಿ ಮೃತಪಟ್ಟವರ ಸಂಖ್ಯೆ 611ಕ್ಕೆ ಏರಿದೆ.

ದೇಶದಲ್ಲಿ ವರದಿಯಾಗಿರುವ ಸೋಂಕು ಪ್ರಕರಣಗಳ ಸಂಖ್ಯೆ 12,729ಕ್ಕೆ ಏರಿದೆ. ಮಧ್ಯಪ್ರಾಚ್ಯ ವಲಯದ ಮಟ್ಟಿಗೆ, ಕೊರೋನವೈರಸ್ ಸೋಂಕು ಇರಾನ್‌ನಲ್ಲಿ ತಾಂಡವವಾಡುತ್ತಿದೆ. ಅಲ್ಲಿನ ಹಲವು ಹಿರಿಯ ರಾಜಕಾರಣಿಗಳಲ್ಲೂ ಸೋಂಕು ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News