ದಿಲ್ಲಿ: ಭಾರೀ ಆಲಿಕಲ್ಲು ಮಳೆ

Update: 2020-03-14 16:57 GMT

ಹೊಸದಿಲ್ಲಿ,ಮಾ.14: ದಿಲ್ಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್)ದ ಹಲವೆಡೆಗಳಲ್ಲಿ ಶನಿವಾರ ಆಲಿಕಲ್ಲುಗಳಿಂದ ಕೂಡಿದ ಭಾರೀ ಮಳೆ ಸುರಿದಿದ್ದು,ಇದರ ಪರಿಣಾಮವಾಗಿ ಹಲವಾರು ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯುಂಟಾಗಿತ್ತು. ಏಮ್ಸ್ ಬಳಿಯ ತಗ್ಗುಪ್ರದೇಶಗಳಲ್ಲಿ ನೀರು ತುಂಬಿಕೊಂಡಿರುವುದು ವರದಿಯಾಗಿದೆ.

ದಿನದ ಕನಿಷ್ಠ ತಾಪಮಾನವು ಋತುವಿನ ಸರಾಸರಿ 16.4ಕ್ಕಿಂತ ಒಂದು ಡಿಗ್ರಿ ಸೆಲ್ಶಿಯಸ್ ಅಧಿಕವಾಗಿತ್ತು ಎಂದು ತಿಳಿಸಿರುವ ಭಾರತೀಯ ಹವಾಮಾನ ಇಲಾಖೆಯು, ಹರ್ಯಾಣ,ಜಾರ್ಖಂಡ್,ಉತ್ತರ ಛತ್ತೀಸ್‌ಗಡ ಮತ್ತು ಬಿಹಾರಗಳಲ್ಲಿಯೂ ಮಳೆಯಾಗಿದೆ ಎಂದು ಟ್ವೀಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News