ಕೊರೋನವೈರಸ್ ಸೋಂಕು: ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ಬೆಲೆ 50 ರೂ.ಗಳಿಗೆ ಏರಿಕೆ

Update: 2020-03-17 15:00 GMT

ಹೊಸದಿಲ್ಲಿ,ಮಾ.17: ಕೊರೋನವೈರಸ್ ಸೋಂಕಿನ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ರೈಲ್ವೆ ನಿಲ್ದಾಣಗಳನ್ನು ಪ್ರವೇಶಿಸುವ ಜನರ ಸಂಖ್ಯೆಯನ್ನು ಕನಿಷ್ಠಗೊಳಿಸಲು ಭಾರತೀಯ ರೈಲ್ವೆಯು ಮುಂಬೈ,ವಡೋದರಾ,ಅಹ್ಮದಾಬಾದ್ ರಾಜಕೋಟ್ ಮತ್ತು ಭಾವನಗರ ಸೇರಿದಂತೆ ದೇಶದ ಹಲವೆಡೆಗಳಲ್ಲಿಯ ತನ್ನ 250 ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ದರವನ್ನು 10 ರೂ.ಗಳಿಂದ 50 ರೂ.ಗೆ ಏರಿಸಿದ್ದು,ಇದು ಮಂಗಳವಾರ ದಿಂದಲೇ ಜಾರಿಗೊಂಡಿದೆ.

 ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚುವರಿ ಜನರ ದಟ್ಟಣೆಯನ್ನು ತಗ್ಗಿಸಲು ಈ ತಾತ್ಕಾಲಿಕ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News