ನೋಯ್ಡದ ನಿವಾಸಿಗೆ ಕೊರೋನ ವೈರಸ್ ಸೋಂಕು ದೃಢ

Update: 2020-03-18 16:22 GMT

ನೋಯ್ಡ, ಮಾ. 18: ಉತ್ತರಪ್ರದೇಶದ ನೋಯ್ಡದ ವ್ಯಕ್ತಿಯೋರ್ವರಿಗೆ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಕೊರೋನ ಸೋಂಕು ತಗಲಿದೆ ಎನ್ನಲಾದ ವ್ಯಕ್ತಿ ಇತ್ತೀಚೆಗೆ ತನ್ನ ಪತ್ನಿಯೊಂದಿಗೆ ಇಂಡೋನೇಶ್ಯಾಕ್ಕೆ ಭೇಟಿ ನೀಡಿ ಮಾರ್ಚ್ 3ಕ್ಕೆ ಹಿಂದಿರುಗಿದ್ದರು. ಕೆಲವು ದಿನಗಳ ಬಳಿಕ ಅವರಲ್ಲಿ ಕೊರೋನ ವೈರಸ್ ಸೋಂಕಿನ ಲಕ್ಷಣ ಕಂಡು ಬಂದಿದ್ದವು. ಕೂಡಲೇ ಅವರು ಆರೋಗ್ಯಾಧಿಕಾರಿಗಳನ್ನು ಭೇಟಿಯಾಗಿದ್ದರು. ನೋಯ್ಡಾ ಸೆಕ್ಟರ್ 41ರ ನಿವಾಸಿಯಾಗಿರುವ ಇವರು ವೈದ್ಯಕೀಯ ವಿಜ್ಞಾನದ ಸರಕಾರಿ ಸಂಸ್ಥೆಯ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ.

 ಇಂಡೋನೇಶ್ಯಾದಿಂದ ಮಾರ್ಚ್ 3ರಂದು ಹಿಂದಿರುಗಿದ ಒಂದು ವಾರಗಳ ಬಳಿಕ ಈ ವ್ಯಕ್ತಿ ನಮ್ಮನ್ನು ಭೇಟಿಯಾದ ನಾವು ಕೂಡಲೇ ನಾವು ಅವರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್‌ಗೆ ಕಳುಹಿಸಿದೆವು. ನಮಗೆ ಬುಧವಾರ ಬೆಳಗ್ಗೆ ವರದಿ ದೊರಕಿತು. ವರದಿಯಲ್ಲಿ ಅವರಿಗೆ ಕೊರೋನ ಸೋಕು ಇರುವುದು ದೃಢಪಟ್ಟಿದೆ. ಅವರನ್ನು ನಿಗಾದಲ್ಲಿ ಇರಿಸಲಾಗಿದೆ. ಅವರ ಪತ್ನಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಡಾ. ಲಕ್ನೋದ ರಾಜ್ಯ ಪರಿವೀಕ್ಷಣಾ ಅಧಿಕಾರಿ ಡಾ. ವಿಕಾಸೇಂದ್ರು ಅಗರ್ವಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News