×
Ad

4 ವರ್ಷಗಳಲ್ಲಿ ದೇಶದಲ್ಲಿ 1,75,695 ಅತ್ಯಾಚಾರ ಪ್ರಕರಣಗಳು: ಈ ರಾಜ್ಯ ನಂ.1

Update: 2020-03-20 21:24 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಮಾ.20: ದೇಶದಲ್ಲಿ 2014ರಿಂದ 2018ರವರೆಗಿನ ಅವಧಿಯಲ್ಲಿ 1,75,695 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು,ಈ ಎಲ್ಲ ವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್‌ಸಿಆರ್‌ಬಿ)ದ ಇತ್ತೀಚಿನ ಅಂಕಿಅಂಶಗಳು ತೋರಿಸಿವೆ.

 2014ರಲ್ಲಿ 36,739, 2015ರಲ್ಲಿ 34,094, 2016ರಲ್ಲಿ 38,947, 2017ರಲ್ಲಿ 32,559 ಮತ್ತು 2018ರಲ್ಲಿ 33,356 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

ಈ ಐದು ವರ್ಷಗಳ ಅವಧಿಯಲ್ಲಿ ಅತ್ಯಂತ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ಮಧ್ಯಪ್ರದೇಶ(25,259)ದಲ್ಲಿ ದಾಖಲಾಗಿದ್ದರೆ, ನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ(19,406), ರಾಜಸ್ಥಾನ(18,542) ಮತ್ತು ಮಹಾರಾಷ್ಟ್ರ(15,613) ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News