ಗುಜರಾತ್: ಒಂದೇ ದಿನ 6 ಕೊರೋನ ಪ್ರಕರಣ; ಸೋಂಕಿತರ ಸಂಖ್ಯೆ 13ಕ್ಕೇರಿಕೆ
ಅಹ್ಮದಾಬಾದ್, ಮಾ.21: ಗುಜರಾತ್‌ನಲ್ಲಿ ಕೊರೋನ ವೈರಸ್‌ನ ಆರು ಹೊಸ ಪ್ರಕರಣಗಳು ಶನಿವಾರ ವರದಿಯಾಗಿವೆ. ಇದರೊಂದಿಗೆ ಈ ರಾಜ್ಯದಲ್ಲಿ ಈ ಮಾರಣಾಂತಿಕ ಸೋಂಕು ತಗಲಿದವರ ಸಂಖ್ಯೆ 13ಕ್ಕೇರಿದೆಯೆಂದು ಮುಖ್ಯಮಂತ್ರಿ ವಿಜಯ್ ರೂಪಾನಿ ತಿಳಿಸಿದ್ದಾರೆ.
ಇವರ ಪೈಕಿ 12 ಮಂದಿ ಇತ್ತೀಚೆಗೆ ವಿದೇಶಕ್ಕೆ ಪ್ರಯಾಣಿಸಿದವರಾಗಿದ್ದರೆ, ಇನ್ನೋರ್ವ ವ್ಯಕ್ತಿಯು ಸೂರತ್‌ನ ನಿವಾಸಿಯಾಗಿದ್ದು, ಆತ ತೀರಾ ಇತ್ತೀಚೆಗೆ ದಿಲ್ಲಿ ಹಾಗೂ ಜೈಪುರಕ್ಕೆ ಭೇಟಿ ನೀಡಿದ್ದನೆಂದು ಅವರು ಹೇಳಿದ್ದಾರೆ.
‘‘ಈ 12 ಪ್ರಕರಣಗಳ ಪೈಕಿ ನಾಲ್ಕು ಪ್ರಕರಣಗಳು ಅಹ್ಮದಾಬಾದ್ ನಗರದಿಂದ ವರದಿಯಾಗಿದ್ದರೆ, ಇನೊಂ್ನದು ಅಹ್ಮದಾಬಾದ್ ಗ್ರಾಮಾಂತರದಲ್ಲಿ, ಸೂರತ್ ಹಾಗೂ ವಡೋದರಾದಲ್ಲಿ ತಲಾ ಮೂರು ಪ್ರಕರಣಗಳು ಮತ್ತು ರಾಜಕೋಟ್ ಹಾಗೂ ಗಾಂಧೀನಗರಗಳಲ್ಲಿ ತಲಾ ಒಂದು ಪ್ರರಣ ಪತ್ತೆಯಾಗಿವೆಯೆಂದ ರೂಪಾನಿ ತಿಳಿಸಿದ್ದಾರೆ.
ಅಹ್ಮದಾಬಾದ್‌ನ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುದತ್ತಿದ್ದ ಅವರು ರಾಜ್ಯದಲ್ಲಿ ಯಾವುದೇ ರೀತಿಯ ಸಂಭಾವ್ಯ ಧಾರುಣ ಸ್ಥಿತಿಯನ್ನು ಎದುರಿಸಲು ತನ್ನ ಸರಕಾರ ಸಿದ್ಧವಿರುವುದಾಗಿ ಹೇಳಿದ ಮುಖ್ಯಮಂತ್ರಿ ಜನರು ಮನೆಯೊಳಗೆ ಉಳಿದುಕೊಳ್ಳುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಲುವಿಕೆ ಹಾಗೂ ಸ್ವಚ್ಛತೆಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುವಂತೆ ಅವರು ಕರೆ ನೀಡಿದರು.
1200 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ನೂತನ ವಿಭಾಗವನ್ನು ವಿಶೇಷವಾಇ ಕರೋನ ವೈರಸ್ ರೋಗಿಗಳ ಚಿಕಿತ್ಸೆಗಾಗಿ ಮೀಸಲಿಡಲಾಗುವುದೆಂದು ರೂಪಾನಿ ತಿಳಿಸಿದರು.