ಕೊರೋನಾದಿಂದ ಕೆಲಸ ಕಳೆದುಕೊಂಡವರಿಗೆ 80 ಶೇ. ವೇತನ

Update: 2020-03-21 16:53 GMT

ಲಂಡನ್, ಮಾ. 21: ಬ್ರಿಟನ್‌ನ ಹಣಕಾಸು ಸಚಿವ ಹಾಗೂ ಖಜಾನೆ ಚಾನ್ಸಲರ್ ರಿಶಿ ಸುನಾಕ್ ಶುಕ್ರವಾರ, ಕೊರೋನವೈರಸ್‌ನಿಂದಾಗಿ ಕೆಲಸ ಕಳೆದುಕೊಂಡಿರುವ ಜನರಿಗೆ ವೇತನ ನೀಡುವ ಯೋಜನೆಯೊಂದನ್ನು ಘೋಷಿಸಿದ್ದಾರೆ.

ಕೊರೋನವೈರಸ್ ಬೀಗಮುದ್ರೆಯಿಂದಾಗಿ ಕೆಲಸ ಕಳೆದುಕೊಂಡಿರುವ ಜನರಿಗೆ ಅವರ ವೇತನದ 80 ಶೇಕಡದಷ್ಟನ್ನು ನೀಡುವುದಾಗಿ ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿಯ ಅಳಿಯನೂ ಆಗಿರುವ ಸುನಾಕ್ ಹೇಳಿದರು.

‘‘ಈ ಕಷ್ಟದ ಕಾಲದಲ್ಲಿ ನಾವು ಜನರ ಜೊತೆಗೆ ನಿಲ್ಲುತ್ತೇವೆ ಹಾಗೂ ನಾವು ಹೇಳಿದ್ದನ್ನು ಮಾಡುತ್ತೇವೆ’’ ಎಂದು ಪ್ರಧಾನಿ ಕಚೇರಿಯಿರುವ ಡೌನಿಂಗ್ ಸ್ಟ್ರೀಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು. ಈ ಸಂದರ್ಭದಲ್ಲಿ ಪ್ರಧಾನಿ ಬೊರಿಸ್ ಜಾನ್ಸನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News